Hombale Films -Sudeep : ಹೊಂಬಾಳೆ ಫಿಲಮ್ಸ್ – ಕಿಚ್ಚ ಸುದೀಪ್ ಕಾಂಬಿನೇಷನ್ ನ ಸಿನಿಮಾಗೆ ಕೀರ್ತಿ ನಾಯಕಿ..???
ಮಹಾನಟಿ , ರಾಷ್ಟ್ರ ಪ್ರಶಸ್ತಿ ವಿಜೇತರಾದ ಸೌತ್ ನ ಖ್ಯಾತ ನಟಿ ಕೀರ್ತಿ ಸುರೇಶ್ ಸದ್ಯ ಟಾಲಿವುಡ್ , ಕಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಯುಸಿಯಿದ್ದು ಟಾಪ್ ನಟಿಯರ ಪೈಕಿ ಒಬ್ಬರಾಗಿದ್ದಾರೆ.. ಇಂದು ಕೀರ್ತಿ ಸುರೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ..
ಈ ಹಿನ್ನೆಲೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಬರ್ತ್ ಡೇ ಗೆ ವಿಷ್ ಮಾಡಿರೋದು ಇದೀಗ ಹೊಸ ಕುತೂಹಲ ಕೆರಳಿಸಿದೆ.. ಹೊಂಬಾಳೆ ಫಿಲಮ್ಸ್ ಏನೇ ಅಪ್ ಡೇಟ್ ನೀಡೋಕು ಮುಂಚೆ ಒಂದು ಸುಳಿವು ಬಿಟ್ಟುಕೊಡುತ್ತೆ.. ಅಂತೆಯೇ ಇದೀಗ ಕೀರ್ತಿಗೆ ವಿಷ್ ಮಾಡುವ ಮೂಲಕ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಕೀರ್ತಿ ಕಾಣಿಸಿಕೊಳ್ಳುಚವ ಸುಳಿವು ನೀಡಿದ್ದಾರೆ..
ಆದ್ರೆ ಪ್ರಶ್ನೆ ಕೀರ್ತಿ ಯಾವ ಸಿನಿಮಾದಲ್ಲಿ , ಯಾವ ನಾಯಕನ ಜೊತೆಗೆ ನಟಿಸಲಿದ್ದಾರೆ ಎಂಬುದು.. ಇತ್ತೀಚೆಗೆ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಘೋಷಣೆ ಮಾಡಿದೆ.. ಫಹಾದ್ – ಪವನ್ ಕುಮಾರ್ ಕಾಂಬಿನೇಷನ್ ನ ಧೂಮಂ , ಪೃಥ್ವಿ ಸುಕುಮಾರ್ ಟೈಸನ್ ಅಥವ , ಸುಧಾ ಕೊಂಗರ ಅವರ ನಿರ್ದೇಶನದ ಸಿನಿಮಾಗಳು ಇವೆ.. ಈ ಸಿನಿಮಾಗಳ ಪೈಕಿ ಯಾವುದರಲ್ಲಿ ಮಹಾನಟಿ ನಟಿಸಬಹದು ಎಂಬೆಲ್ಲಾ ಚರ್ಚೆಗಳಾರಂಭಾವಗಿದೆ..
ಹಾಗೆ ನೋಡೋದಾದ್ರೆ ಇತ್ತೀಚೆಗೆ ಹೊಂಬಾಳೆ ಫಿಲಮ್ಸ್ ಕಾರ್ಯಕಾರಿ ನಿರ್ಮಾಕರಾದ ಕಾರ್ತಿಕ್ ಗೌಡ ಅವರು ಕಿಚ್ಚ ಸುದೀಪ್ ಜೊತೆಗೊಂದು ಫೋಟೋ ಹಂಚಿಕೊಂಡು ಹೊಸ ಜರ್ನಿಯ ರಂಭ ದು ಬರೆದುಕೊಂಡಿದ್ದರು.. ಆ ಮೂಲಕ ಕಿಚ್ಚ ಸುದೀಪ್ ಅವರು ಹೊಂಬಾಳೆ ಫಿಲಮ್ಸ್ ಜೊತೆಗೆ ಸಿನಿಮಾ ಮಾಡೋದು ಪಕ್ಕ ಅಂತಲೇ ಚರ್ಚೆಗಳಾಗುತ್ತಿದ್ದು ಈ ಸಿನಿಮಾಗೂ ಕೀರ್ತಿ ಸುರೇಶ್ ನಾಯಕಿಯಾದ್ರೆ ಅಚ್ಚರಿ ಪಡಬೇಕಾಗಿಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್..