ಇತ್ತೀಚೆಗೆ ಸೋಷಿಯಲ್ ಮೀಡಿಯಾದ ಸೆನ್ಷೇಷನ್.. ಉರ್ಫಿ ಜಾವೇದ್ ಸದ್ಯ ಬರ್ತ್ ಡೇ ಸಂಭ್ರಮದಲ್ಲಿದ್ದು ಆಪ್ತರು , ಸ್ನೇಹಿತರ ಜೊತೆಗೆ ಬರ್ತ್ ಡೇ ಆಚರಿಸಿಕೊಂಡು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು..
ಅಂದ್ಹಾಗೆ ಉರ್ಫಿಯ ಮಾಜಿ ಪ್ರಿಯಕರ ಪಾರಸ್ ಕಲ್ನಾವತ್ ಸಹ ಉರ್ಫಿಯ ಜೊತೆಗಿನ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡು ಬರ್ತ್ ಡೇಗೆ ಶುಭಕೋರಿದ್ದರು..
ನಟ ಪಾರಸ್ ಕಲ್ನಾವತ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಉರ್ಫಿ ಜಾವೇದ್ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಮಾಜಿ ಪ್ರೇಮಿಗಳಾದ ಪರಾಸ್ ಕಲ್ನಾವತ್ ಮತ್ತು ಉರ್ಫಿ ಜಾವೇದ್ ಅಕಾ ಉರ್ಫಿ ನಡುವೆ ಈಗ ಪ್ರೀತಿ ಇಲ್ಲದೇ ಇದ್ದರೂ ಯಾವುದೇ ದ್ವೇಷವಂತೂ ಇಲ್ಲ ಎಂಬುದನ್ನ ಇದು ತೋರುತ್ತದೆ..
ಉರ್ಫಿ ಜಾವೇದ್… ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ , ಚರ್ಚೆಯಾಗು , ಟ್ರೋಲ್ ಕೂಡ ಆಗುವ ನಟಿ ಅಂದ್ರೆ ಉರ್ಫಿ.. ವಿಲಕ್ಷಣ ಮತ್ತೆ ಸಿಕ್ಕಾಪಟ್ಟೆ ಬೋಲ್ಡ್ ಫ್ಯಾಷನ್ ಮೂಲಕ ಸುದ್ದಿಯಲ್ಲೇ ಇರುವ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಸೀಸನ್ ಮೂಲಕ ಗುರುತಿಸಿಕೊಂಡವರು..