Baba Ramdev : ಸಲ್ಮಾನ್ ಖಾನ್ ಡ್ರಗ್ ವೆಸನಿ – ಬಾಬಾ ರಾಮ್ ದೇವ್ ಸ್ಪೋಟಕ ಹೇಳಿಕೆ..!!
ಬಾಲಿವುಡ್ ಮತ್ತು ಡ್ರಗ್ಸ್ ನಡುವೆ ಸಂಪರ್ಕವಿದೆ ಎಂದು ಹೇಳುವ ಯೋಗ ಗುರು ಬಾಬಾ ರಾಮ್‌ದೇವ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಮಗನ ಹೆಸರನ್ನ ಉಲ್ಲೇಖಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ವೇಳೆ ರಾಮ್ ದೇವ್ ಈ ಹೇಳಿಕೆ ನೀಡಿದ್ದಾರೆ. ಮೊರಾದಾಬಾದ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗ ಗುರು, “ಶಾರುಖ್ ಖಾನ್ ಮಗ (ಆರ್ಯನ್ ಖಾನ್) ಡ್ರಗ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದಾನೆ. ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ. ನನಗೆ ಅಮೀರ್ ಖಾನ್ ಗೊತ್ತಿಲ್ಲ ದೇವರಿಗೆ ಗೊತ್ತು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಎಷ್ಟೋ ಸಿನಿಮಾ ನಟರು ಡ್ರಗ್ಸ್ ಸೇವಿಸ್ತಾರೆ ಅನ್ನೋದು ಯಾರಿಗೆ ಗೊತ್ತು, ನಟಿಯರ ಸ್ಥಿತಿ ಇನ್ನೂ ಹೀನಾಯವಾಗಿದೆ, ಚಿತ್ರರಂಗದಲ್ಲಿ ಎಲ್ಲೆಲ್ಲೂ ಡ್ರಗ್ಸ್. ಬಾಲಿವುಡ್ ನಲ್ಲಿ ಡ್ರಗ್ಸ್ ಇದೆ, ರಾಜಕೀಯದಲ್ಲಿ ಡ್ರಗ್ಸ್ ಇದೆ” ಎಂದಿದ್ದಾರೆ. ಆದರೆ, ರಾಮದೇವ್ ಆರೋಪಕ್ಕೆ ಯಾರೂ ಪ್ರತಿಕ್ರಿಯಿಸಿಲ್ಲ.
“ಚುನಾವಣೆ ಸಮಯದಲ್ಲಿ ಮದ್ಯವನ್ನು ವಿತರಿಸಲಾಗುತ್ತದೆ. ಭಾರತವು ಪ್ರತಿಯೊಂದು ಮಾದಕ ವಸ್ತುಗಳಿಂದ ಮುಕ್ತವಾಗಬೇಕು ಎಂದು ನಾವು ಪ್ರತಿಜ್ಞೆ ತೆಗೆದುಕೊಳ್ಳಬೇಕು. ಇದಕ್ಕಾಗಿ ನಾವು ಚಳವಳಿಯನ್ನು ಪ್ರಾರಂಭಿಸುತ್ತೇವೆ” ಎಂದು ಬಾಬಾ ರಾಮ್ ದೇವ್ ಹೇಳಿದರು.
ಕಳೆದ ವರ್ಷ “ಡ್ರಗ್ಸ್-ಆನ್-ಕ್ರೂಸ್” ಪ್ರಕರಣದಲ್ಲಿ ಬಂಧಿತರಾಗಿದ್ದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಗಳಿಂದ ಮುಕ್ತರಾಗಿದ್ದರು. 20 ದಿನ ಜೈಲಿನಲ್ಲಿದ್ದ ಬಳಿಕ ಜಾಮೀನು ಸಿಕ್ಕಿತ್ತು.