BBK 9 : ಈ ಸ್ಪರ್ಧಿಯನ್ನ ಆಯ್ಕೆ ಮಾಡಿಕೊಂಡು ತಪ್ಪು ಮಾಡಿತೇ ಬಿಗ್ ಬಾಸ್..??
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದ್ದು ನೋಡ ನೋಡುತ್ತಲೇ ಮೂರು ವಾರ ಮುಗಿದು ನಾಲ್ಕನೇ ವಾರಕ್ಕೆ ತಲುಪಿದೆ.. ಆದ್ರೆ ಸೀಸನ್ 8 ಪೂರ್ತಿ ಹೈಲೇಟ್ ಆಗಿ ಟ್ರೆಂಡ್ ಆಗ್ತಿದ್ದ ದಿವ್ಯಾ ಉರುಡುಗ ಈ ಬಾರಿ ಕಂಪ್ಲೀಟ್ ಸೈಲೆಂಟ್ ಆಗಿಬಿಟ್ಟಿದ್ದಾರೆ..
ಈ ಬಾರಿ ಮಾಜಿ ಸ್ಪರ್ಧಿಗಳು ಒಟಿಟಿ ಸ್ಪರ್ಧಿಗಳು ಹೊಸಬರ ಸಮಾಗಮವಾಗಿದ್ದು , ಹೋದ ಸೀಸನ್ ನಂತೇಯೇ ಈ ಬಾರಿಯೂ ದಿವ್ಯಾ ಶೈನ್ ಆಗಬಹುದೆಂದೇ ಅಂದಾಜಿಸಲಾಗಿತ್ತು..
ಆದ್ರೆ ದಿವ್ಯಾ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ.. ಕಳೆದ ಬಾರಿ ಅರವಿಂದ್ ಅವರ ಜೊತೆಗಿನ ಅವರ ಆತ್ಮೀಯತೆಯಿಂದ ಆರ್ವಿ ಎಂದೇ ಟ್ರೆಂಡ್ ಆಗುತ್ತಾ ಹೈಲೇಟ್ ಆಗಿ ಟಾಪ್ 3 ಗೂ ಬಂದಿದ್ದರು.. ಆದ್ರೆ ಈ ಬಾರಿ ಅವರು ಮಿಂಚುತ್ತಿಲ್ಲ.. ಹೀಗಾಗಿ ಫ್ಯಾನ್ಸ್ ದಿವ್ಯಾ ಅವರನ್ನ ಆಯ್ಕೆಮಾಡಿಕೊಂಡು ಬಿಗ್ ಬಾಸ್ ತಪ್ಪು ಮಾಡಿತೇ ಎಂದೇ ಚರ್ಚೆ ಮಾಡುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಇದೇ ಚರ್ಚೆಯಾಗಿದೆ,..