BBK9 : ‘ಹೆಣ್ಣಿಗೆ ಹೆಣ್ಣೇ ಶತ್ರು – ಈ ಮನೆಯಲ್ಲಿ ಮಹಿಳೆಯರದ್ದೇ ಗ್ಯಾಂಗ್ ಇದೆ’
BBK9 : ಮೂರನೇ ವಾರ ಮುಗಿಸಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು ಈಗಾಗಲೇ ನಾಲ್ಕನೇ ವಾರದ ಲಿಮಿನೇಷನ್ ಸುತ್ತಿಗೂ ನಾಮಿನೇಷನ್ ಪ್ರಕ್ರಿಯೆ ನಡೆದಿದೆ..
ಈಗಾಗಲೇ , ಐಶ್ವರ್ಯ , ನವಾಜ್ , ದರ್ಶನ್ ಔಟ್ ಆಗಿದ್ದು ಉಳಿದ 15 ಸ್ಪರ್ಧಿಗಳು ಪ್ರತಿವಾರವೂ ತಮ್ಮ ಪ್ರತಿಭೆಯ ಅನಾವರಣ ಮಾಡಲೇಬೇಕು.. ಆಗಲೇ ಅವರಿಗೆ ಉಳಿಗಾಲ..
ಅಂದ್ಹಾಗೆ ಈ ವಾರ 7 ಸದಸ್ಯರು ನಾಮಿನೇಟ್ ಆಗಿದ್ದಾರೆ.. ಮಯೂರಿ , ನೇಹಾ , ಕಾವ್ಯಶ್ರೀ , ಗುರೂಜಿ , ದಿವ್ಯಾ , ಸಾನ್ಯಾ… ಈ ವಾರದ ಕ್ಯಾಪ್ಟನ್ ಆಗಿರುವ ದೀಪಿಕಾ ದಾಸ್ ಸಾನ್ಯಾರನ್ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ…
ನಾಮಿನೇಷನ್ ಪ್ರಕ್ರಿಯೆಯ ಬಳಿಕ ಸ್ಪರ್ಧಿಗಳು ಬೇಸರಗೊಂಡಿದ್ದಾರೆ.. ಅದ್ರಲ್ಲೂ ಕಾವ್ಯಶ್ರೀ ಪ್ರಶಾಂತ್ ಸಂಬರ್ಗಿ ಬಳಿ ಬೇಸರ ಹೊರಹಾಕಿದ್ದಾರೆ.. ಕಾವ್ಯಾ ಶ್ರೀ ಅವರನ್ನು ಮನೆಯ ಮಹಿಳಾ ಸದಸ್ಯರೇ ನಾಮಿನೇಟ್ ಮಾಡಿದ್ದರು. ಹೀಗಾಗಿ ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಕಾವ್ಯಾ ಬೇಸರ ವ್ಯಕ್ತಪಡಿಸಿದರು.
ಈ ಮನೆಯಲ್ಲಿ ಹುಡುಗಿಯರದ್ದೇ ಒಂದು ಗ್ಯಾಂಗ್ ಇದೆ. ಅವರ ಜೊತೆ ಸೇರಿಲ್ಲ ಅಂದರೆ ನಾವು ನಾಮಿನೇಟ್ ಆಗ್ತೀವಿ ಎಂದು ಕಾವ್ಯಾ ಆರೋಪಿಸಿದ್ದಾರೆ.