ರಿಷಬ್ ಶೆಟ್ಟಿಯ ದರ್ಶಕತ್ವದಲ್ಲಿ ಮೂಡಿಬಂದಿರುವ ಕಾಂತಾರ, ಸಾರ್ವಜನಿಕರು ಮತ್ತು ಚಿತ್ರ ವಿಮರ್ಶಕರಿಂದ ಏಕಕಾಲಕ್ಕೆ ಅದ್ಭುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ತುಳುನಾಡಿನ ವಿಶಿಷ್ಠ ಕಥಾ ಹಂದರವನ್ನ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ನಿಬ್ಬೆರಗಿನಿಂದ ನೋಡುತ್ತಿದೆ.
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಮಾತ್ರವಲ್ಲದೇ ಹಿಂದಿ ಡಬ್ಬಿಂಗ್ ಅವತರಣಿಕೆಯಲ್ಲೂ ಚಿತ್ರ ಕಾಂತಾರ ಕಮಾಲ್ ಮಾಡುತ್ತಿದೆ. ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯನ್ನು ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು.
ಸಿನಿಮಾ ಬಾಕ್ಸ್ ಆಫೀಸ್ ವಿಮರ್ಶಕ ತರುಣ್ ಆದರ್ಶ್ ಅವರ ಟ್ವೀಟ್ ಪ್ರಕಾರ, ಚಿತ್ರದ ಹಿಂದಿ ಆವೃತ್ತಿ ಮೊದಲ ವಾರಾಂತ್ಯದಲ್ಲಿಯೇ 7 ಕೋಟಿ 52 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಶುಕ್ರ 1.27 ಕೋಟಿ, ಶನಿ 2.75 ಕೋಟಿ, ಭಾನುವಾರ 3.50 cr. ಒಟ್ಟು: 7 ಕೋಟಿಗೂ ಮೀರಿ ಕಲೆಕ್ಷನ್ ಮಾಡಿದೆ.
ಸೋಮವಾರದ ಬಾಕ್ಸ್ ಆಫೀಸ್ ವರದಿ ಪ್ರಕಾರ 1 ಕೋಟಿ 45 ಲಕ್ಷ ರೂಪಾಯಿ ಕೊಳ್ಳೆ ಹೊಡೆದಿದೆ. ಇನ್ನೂ ಆಂಧ್ರ ಮತ್ತು ತೆಲಂಗಾಣದಲ್ಲಿ ಸೋಮವಾರ 3.5 ಕೋಟಿ ರುಪಾಯಿ ಗಳಿಕೆ ಮಾಡಿದೆ. ಕಾಂತಾರ ಮೌತ್ ಪಬ್ಲಿಸಿಟಿಯಿಂದಲೇ ಪ್ಯಾನ್ ಇಂಡಿಯಾ ಚಿತ್ರವವಾಗಿ ಬದಲಾಗಿದೆ.