Nora Fatehi : ಬಾಂಗ್ಲಾದೇಶದಲ್ಲಿ ನೋರಾ ಫತೇಹಿ ಡ್ಯಾನ್ಸ್ ಶೋ ಬ್ಯಾನ್..!!!
ಬಾಲಿವುಡ್ ನಟಿ ನೋರಾ ಫತೇಹಿ ಅವರ ನೃತ್ಯ ಕಾರ್ಯಕ್ರಮಕ್ಕೆ ಬಾಂಗ್ಲಾದೇಶ ಸರ್ಕಾರ ಅನುಮತಿ ನಿರಾಕರಿಸಿದೆ, ದುಂದುಗಾರಿಕೆಗೆ ಡಾಲರ್ ಖರ್ಚು ಮಾಡಲು ಬಯಸುವುದಿಲ್ಲ ಎಂದು ಸರ್ಕಾರ ಹೇಳಿದೆ.
ಬಾಂಗ್ಲಾದೇಶದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ ಸೋಮವಾರ ನೋಟಿಸ್ ಜಾರಿ ಮಾಡುವ ಮೂಲಕ ಈ ಮಾಹಿತಿ ಹಂಚಿಕೊಂಡಿದೆ. ಬಾಂಗ್ಲಾದೇಶ ಪ್ರಸ್ತುತ ವಿದೇಶಿ ವಿನಿಮಯ ಮೀಸಲು ಮತ್ತು ಹಣದುಬ್ಬರದೊಂದಿಗೆ ಹೋರಾಡುತ್ತಿದೆ.
ಬಾಂಗ್ಲಾದೇಶದ ಮಹಿಳಾ ನಾಯಕತ್ವದ ನಿಗಮವೊಂದು ಕಾರ್ಯಕ್ರಮವೊಂದರಲ್ಲಿ ನೃತ್ಯ ಕಾರ್ಯಕ್ರಮಕ್ಕಾಗಿ ನೋರಾ ಫತೇಹಿಯನ್ನು ಆಹ್ವಾನಿಸಿತ್ತು. ಆದರೆ “ಜಾಗತಿಕ ಪರಿಸ್ಥಿತಿಯ ದೃಷ್ಟಿಯಿಂದ ಮತ್ತು ವಿದೇಶಿ ವಿನಿಮಯ ಮೀಸಲು ಕಾಯ್ದುಕೊಳ್ಳುವ ಉದ್ದೇಶದಿಂದ” ಕಾರ್ಯಕ್ರಮಕ್ಕೆ ನೋರಾ ಫತೇಹಿಗೆ ಅವಕಾಶ ನೀಡಲಾಗಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಸೂಚನೆಯನ್ನ ಹೊರಡಿಸಿದೆ.
ಇಂತಹ ದುಂದು ವೆಚ್ಚವನ್ನು ತಪ್ಪಿಸಬೇಕು ಎಂಬುದು ಸರ್ಕಾರದ ವಾದ.
ಅಕ್ಟೋಬರ್ 12 ರ ಹೊತ್ತಿಗೆ ಬಾಂಗ್ಲಾದೇಶದ ವಿದೇಶಿ ವಿನಿಮಯ ಸಂಗ್ರಹವು $ 36.33 ಶತಕೋಟಿಗೆ ಇಳಿದಿದೆ ಎಂದು ಗಮನಿಸಲಾಗಿದೆ. ಇದು ವರ್ಷದ ಹಿಂದೆ $46.13 ಬಿಲಿಯನ್ ನಲ್ಲಿತ್ತು. ಪ್ರಸ್ತುತ ಬಾಂಗ್ಲಾದೇಶದ ಆರ್ಥಿಕ ಸ್ಥಿತಿಯು ಸುಮಾರು ನಾಲ್ಕು ತಿಂಗಳ ಮೌಲ್ಯದ ಆಮದುಗಳನ್ನ ಸರಿದೂಗಿಸುವಷ್ಟಿದೆ.