Pawan Kalyan : ಚಪ್ಪಲಿಯಲ್ಲಿ ಹಲ್ಲುದುರುವಂತೆ ಹೊಡೆಯುತ್ತೇನೆ : ಪವನ್ ವಿಶ್ವರೂಪ..!!
ವೈಸಿಪಿ ನಾಯಕರುಗಳ ಮನೆಗೆ ನುಗ್ಗಿ ಕೊರಳುಪಟ್ಟಿ ಹಿಡಿದು ಹೊಡೆಯುತ್ತೇನೆ ನನ್ ಮಕ್ಳಾ. ನನ್ನನ್ನು ಪ್ಯಾಕೇಜ್ ಸ್ಟಾರ್ ಅಂತಾ ಬೈಯ್ಯುವ ಸನ್ಯಾಸಿಗಳ ಹಲ್ಲುದುರುವಂತೆ ಚಪ್ಪಲಿಯಲ್ಲಿ ಬಾರಿಸುತ್ತೇನೆ. ಒಂದು ಕೈಯಲ್ಲಿ ಕುತ್ತಿಗೆ ಹಿಡಿದು ಇಸುಕಿ ಹಾಕುತ್ತೇವೆ.. ಇದು ಜನಸೇನಾ ಪಾರ್ಟಿಯ ಅಧ್ಯಕ್ಷ, ಪವರ್ ಸ್ಟಾರ್ ಪವನ್ ಕಲ್ಯಾಣ್ ಫೈಯರ್ ಆದ ವಿಧಾನ..
ಹೌದು..! ವಿಶಾಖಪಟ್ಟಣದಲ್ಲಿ ಆಂಧ್ರ ಆಡಳಿತರೂಢ ವೈಸಿಪಿ ಪಾರ್ಟಿಯಿಂದ ವಿಶಾಖ ಘರ್ಜನಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೇ ದಿನ ಪವನ್ ಕಲ್ಯಾಣ್ ಕೂಡ ವೈಜಾಖ್ ಗೆ ಆಗಮಿಸಿದ್ದು, ಸಾಕಷ್ಟು ಹೈಡ್ರಾಮ ನಡೆದಿತ್ತು. ವೈಜಾಕ್ ವಿಮಾನ ನಿಲ್ದಾಣದಿಂದ ಪವನ್ ಕಲ್ಯಾಣ್ ಬರುತ್ತಿದ್ದಂತೆ ರಸ್ತೆ ತುಂಬೆಲ್ಲಾ ಜನಸೇನಾನಿಗಳು ತುಂಬಿಕೊಂಡಿದ್ದರು.
ಪವನ್ ಕಲ್ಯಾಣ್ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪವನ್ ಕಲ್ಯಾಣ್ ಅವರನ್ನ ರಸ್ತೆಯ ಮಧ್ಯೆದಲ್ಲಿಯೇ ತಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಇದು ಆಂಧ್ರ ದಲ್ಲಿ ಸಾಕಷ್ಟು ಸಂಚಲನಕ್ಕೆ ನಾಂದಿಯಾಡಿತ್ತು.
ಇದಾದ ಬಳಿಕ ಪವನ್ ಕಲ್ಯಾಣ್ ಇಂದು ಮಂಗಳಗಿರಿಯ ತಮ್ಮ ಪಾರ್ಟಿ ಆಫೀಸ್ ನಲ್ಲಿ ಮಾತನಾಡಿದ್ದು, ವೈಸಿಪಿ ನಾಯಕರ ಮೇಲೆ ಮಾತಿನ ದಂಡಯಾತ್ರೆ ಮಾಡಿದ್ದಾರೆ. ಪವನ್ ಕಲ್ಯಾಣ್ ಮೂರು ಮದುವೆಗಳನ್ನ ಮಾಡಿಕೊಂಡಿದ್ದಾನೆ ಅಂತಾ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾನು ಒಬ್ಬರಿಗೆ ವಿಚ್ಛೇದನಾ ನೀಡಿ ಮತ್ತೊಬ್ಬರನ್ನ ಮದುವೆ ಮಾಡಿಕೊಂಡಿದ್ದೇನೆ. ನಿಮ್ಮಂತೆ ಒಬ್ಬರನ್ನ ಮದುವೆಯಾಗಿ ಮೂವತ್ತು ಜನರನ್ನು ಇಟ್ಟುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ವೈಸಿಪಿ ನಾಯಕರನ್ನ ಸನ್ಯಾಸಿಗಳು, ಅದಮರು ಅಂತಾ ಘರ್ಜಿಸಿದ ಪವನ್ ಕಲ್ಯಾಣ್, ಯುದ್ಧಕ್ಕೆ ಸಿದ್ಧ ಅಂತಾ ನೀವು ಹೇಳಿದ್ರೆ ಕಲ್ಲು, ಹಾಕಿ ಸ್ಟಿಕ್ಸ್ ಯಾವುದಕ್ಕಾದ್ರೂ ನಾನು ರೆಡಿ ಅಂತಾ ಸವಾಲು ಹಾಕಿದರು.
ಎಷ್ಟು ಮಂದಿ ವೈಸಿಪಿ ಗೂಂಡಾ ಎಂಎಲ್ ಎ ಮಕ್ಳು ಬರ್ತಿರೋ ಬನ್ನಿ, ಇಲ್ಲಿಯವರೆಗೂ ಪವನ್ ಕಲ್ಯಾಣ್ ಒಳ್ಳೆತನ, ಸಹನೆಯನ್ನ ನೋಡಿದ್ದೀರಾ, ಇಂದಿನಿಂದ ಪವನ್ ಕಲ್ಯಾಣ್ ಆವೇಶವನ್ನು ಆಕ್ರೋಶದ ಜ್ವಾಲೆಯನ್ನ ನೋಡುತ್ತೀರಾ ಎಂದು ಪವನ್ ಕಲ್ಯಾಣ್ ಗುಡುಗಿದ್ದಾರೆ.