BiggBoss Kannada 9 : ಕೊನೆಗೂ ರೂಪೇಶ್ ರಾಜಣ್ಣರನ್ನ ಒಪ್ಪೇ ಬಿಟ್ಟರೂ ಪ್ರಶಾಂತ್ ಸಂಬರ್ಗಿ..!!!
ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿನಿಂದಲೂ ಸಾಕಷ್ಟು ರೋಚಕತೆಯಿಂದ ಕೂಡಿದೆ.. ಇಂಟ್ರೆಸ್ಟಿಂಗ್ ಆಗಿದೆ.. ಜಗಳ , ಗಾಸಿಪ್ ಗಳು ನಡೆಯುತ್ತಿದೆ.. ಅದ್ರಲ್ಲೂ ಸದಾ ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಕಿತ್ತಾಟ ನಡೆಯುತ್ತಲೇ ಇರುತ್ತೆ.. ಕೆಲವೊಮ್ಮೆ ವಯಕ್ತಿಕ ವಿಚಾರಗಳನ್ನೂ ಎಳೆತಂದು ಕಿತ್ತಾಡಿದ್ದಾರೆ..
ಆದ್ರೀಗ ಕೊನೆಗೂ ಪ್ರಶಾಂತ್ ಸಂಬರ್ಗಿ ರೂಪೇಶ್ ರಾಜಣ್ಣ ಅವರ ನಡೆಯನ್ನ ಮೆಚ್ಚಿದ್ದಾರೆ..
ಹೌದು..! ಇತ್ತೀಚೆಗೆ ಸಾನ್ಯಾ ಮತ್ತು ಸಂಬರ್ಗಿ ಸೇರಿ ಯಾರನ್ನಾದ್ರೂ ಬಕ್ರಾ ಮಾಡೋಕೆ ಪ್ಲಾನ್ ಮಾಡಿದ್ದು ರೂಪೇಶ್ ರಾಜಣ್ಣ ಅವರನ್ನ ಟಾರ್ಗೆಟ್ ಮಾಡಿಕೊಂಡರು..
ಅಂತೆಯೇ ನಾಟಕ ಶುರು ಮಾಡಿದ್ದವರು, ಸಾನ್ಯಗೆ ದಿವ್ಯಶಕ್ತಿ ಇದೆ ಎಂದು ಪ್ರಶಾಂತ್ ಸಂಬರ್ಗಿ ನಂಬಿಸುತ್ತಾ ಬಂದರು. ಇದಕ್ಕೆ ಸರಿಯಾಗಿ ಸಾನ್ಯ ಹಾಗೂ ಪ್ರಶಾಂತ್ ಸಂಬರ್ಗಿ ಸಂದರ್ಭಗಳನ್ನ ಸೃಷ್ಟಿ ಮಾಡಿದರು.
ಅಂದ್ಹಾಗೆ ರಾಜಣ್ಣ ಅವರ ಬಾಟಲ್ ಕೆಲ ದಿನಗಳ ಹಿಂದೆ ಕಳವಾಗಿತ್ತು.. ಸಂಬರ್ಗಿಯವರೇ ಇದನ್ನ ಕದ್ದಿದ್ದರು.. ದಿವ್ಯಾ ಬೆಡ್ ಪಕ್ಕ ಿದನ್ನ ಅಡಗಿಸಿಡಲಾಗಿತ್ತು..
ಸಾನ್ಯ ಬಳಿ ಬಾಟಲ್ ಎಲ್ಲಿದೆ ಎಂದು ಪ್ರಶಾಂತ್ ಹೇಳಿದ್ದರು. ನಂತರ ಸಾನ್ಯ ಅವರು ಬಂದು ರೂಪೇಶ್ ರಾಜಣ್ಣ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಹೇಳಿದರು. ಹೋಗಿ ನೋಡಿದಾಗ ಬಾಟಲ್ ಸಿಕ್ಕಿದೆ. ಆಗ ರಾಜಣ್ಣ ಶಾಕ್ ಆಗ್ತಾರೆ..
ಅಂತೆಯೇ ದೇವರ ಪಕ್ಕದಲ್ಲಿಟ್ಟಿದದ್ದ ಬಾಳೆ ಹಣ್ಣು ಒಳಗಿನಿಂದ ಐದು ಕಡೆಗಳಲ್ಲಿ ಕಟ್ ಆಗಿರುತ್ತದೆ. ಅದನ್ನು ನಿಮಗಾಗದ ಐದು ಜನರಿಗೆ ನೀಡಿ. ಅವರು ಸೋಲುತ್ತಾರೆ ಎಂದಿದ್ದಾರೆ ಸಾನ್ಯ..
ಎಲ್ಲರೂ ರಾಜಣ್ಣ ಇದನ್ನ ಸಂಬರ್ಗಿಗೆ ನೀಡ್ತಾರೆ ಎಂದೇ ಊಹೆ ಮಾಡಿದ್ದರು ಆದ್ರೆ ರಾಜಣ್ಣ ಅವರು ಮಾಡಿದ್ದೇ ಬೇರೆ…
ನನಗೆ ಮೋಸ ಮಾಡಿ ವಿನ್ ಆಗೋಕೆ ನನಗೆ ಇಷ್ಟ ಇಲ್ಲ ಎಂದಿದ್ದಾರೆ. ಈ ಮೂಲಕ ರಾಜಣ್ಣ ಪ್ರಶಾಂತ್ ಸಂಬರ್ಗಿ ಮನಗೆದ್ದಿದ್ದಾರೆ.. ಇನ್ಮುಂದೆಯಾದ್ರೂ ಸಂಬರ್ಗಿ ಹಾಗೂ ರಾಜಣ್ಣ ನಡುವೆ ಎಲ್ಲವೂ ಸರಿಹೋಗಲಿದ್ಯಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ…