Brahmastra : ಬಾಲಿವುಡ್ ಗೆ ಜೀವ ಕೊಟ್ಟ ಾಲಿಯಾ ಭಟ್ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಶೀಘ್ರವೇ OTT ಗೆ ಬರುತ್ತಿದೆ..
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ OTT ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ದೀಪಾವಳಿ ಹಬ್ಬದಂದು OTT ಭರ್ಜರಿ ಮನರಂಜನೆಯನ್ನ ಹೊತ್ತು ತರುತ್ತಿದೆ. ವರದಿಗಳ ಪ್ರಕಾರ, ‘ಬ್ರಹ್ಮಾಸ್ತ್ರ’ ಅಕ್ಟೋಬರ್ 23 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ.
ಅಯನ್ ಮುಖರ್ಜಿ ನಿರ್ದೇಶನ ಈ ಚಿತ್ರ ಸೆಪ್ಟೆಂಬರ್ 9 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಉತ್ತಮ ಗಳಿಕೆ ಮಾಡಿತ್ತು.
ಚಿತ್ರ 2ಡಿ ಮತ್ತು 3ಡಿಯಲ್ಲಿ ಬಿಡುಗಡೆಯಾಗಿದ್ದ ಬ್ರಹ್ಮಾಸ್ತ್ರ 410 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು. ಕೇವಲ 25 ದಿನಗಳಲ್ಲಿ ‘ಬ್ರಹ್ಮಾಸ್ತ್ರ’ 425 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರದ ವಿಎಫ್ ಎಕ್ಸ್ ಕುರಿತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಬಾಲಿವುಡ್‌ನಲ್ಲಿ ನಡೆಯುತ್ತಿರುವ ಬಾಯ್ ಕಟ್ ಟ್ರೆಂಡ್ ನಡುವೆಯೂ ಚಿತ್ರ ಬಿಡುಗಡೆಯಾಗಿ ಬಾಲಿವುಡ್ ಗೆ ಭರವಸೆ ಮೂಡಿಸಿತ್ತು.
ಬ್ರಹ್ಮಾಸ್ತ್ರ’ ಬಿಡುಗಡೆಗೂ ಮುನ್ನವೇ ಚಿತ್ರದ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಮೊದಲ ದಿನವೇ ವಿಶ್ವದಾದ್ಯಂತ 75 ಕೋಟಿ ಗಳಿಸಿತ್ತು. ಎರಡನೇ ದಿನ ಕಲೆಕ್ಷನ್ ಫಿಗರ್ ಸುಮಾರು 160 ಕೋಟಿ ತಲುಪಿತ್ತು.