Chethan Ahimsa : ‘ನನ್ನ ಸೋಲಿಸಲು ಆಗದವರು ನನ್ನ ಪೌರತ್ವ ಕೇಳ್ತಾರೆ’ ಎಂದ ಚೇತನ್ ಅಹಿಂಸಾ..!!
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ದಿನಗಳು ನಟ ಚೇತನ್ ಇದೀಗ ಎಲ್ಲಾ ಭಾಷೆಗಳಲ್ಲೂ ಸೂಪರ್ ಸಕ್ಸಸ್ ಕಾಣ್ತಿರುವ ಕಾಂತಾರ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.. ರಿಷಬ್ ಶೆಟ್ಟಿ ಅವರು ಹೇಳಿರುವಂತೆ ದೈವಾರಾಧಾನೆ , ಭೂತಕೋಲ ನಮ್ಮ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿದ್ದರು..
ಇದಾದ ನಂತರ ಚೇತನ್ ವಿರುದ್ಧ ಭಾರೀ ವಿರೋಧಗಳು ವ್ಯಕ್ತವಾಗ್ತಿದ್ದು , ಚೇತನ್ ವಿವಾದಾತ್ಮಕ ಹೇಳಿಕೆಯನ್ನ ಹಲವರು ಖಂಡಿಸುತ್ತಿದ್ದಾರೆ.. ಆದ್ರೆ ಟೀಕಾಕಾರರಿಗೆ ಉತ್ತರಿಸಿರುವ ಚೇತನ್ ಕೈಲಾಗದವರು ನನ್ನ ಪೌರತ್ವದ ಬಗ್ಗೆ ಪ್ರಶ್ನೆ ಮಾಡ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ..
ಹೌದು..!!
ಟೀಕಾಕಾರರು ಚೇತನ್ ಪೌರತ್ವ ಪ್ರಶ್ನೆ ಮಾಡಿದ ಬೆನ್ನಲ್ಲೇ ಚೇತನ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ..
ಈ ಬಗ್ಗೆ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸುತ್ತಾ , ನಾನು ಚರ್ಚೆಯ ಮೂಲಕ ಗೆಲ್ಲಬೇಕು , ಸಂವಾದದ ಮೂಲಕ ಅರ್ಥ ಮಾಡಿಕೊಳ್ಳಬೇಕು.. ನಾನು ಆಡಿದ ಮಾತುಗಳಲ್ಲಿ ಸುಳ್ಳು ಏನಿದೆ ಅಂತ ಹೇಳಲಿ.. ನನ್ನ ಸೋಲಿಸಲು ಆಗದವರು ನನ್ನ ಪೌರತ್ವದ ಬಗ್ಗೆ ಮಾತನಾಡ್ತಾರೆ.. ನಾನು ಯಾವಾಗಲೂ ಸತ್ಯದ ಪರವಿರುತ್ತೇನೆ ಎಂದಿದ್ದಾರೆ..