ಡಾಲಿ ನಾಯಕನಾಗಿ ನಟಿಸಿರುವ ಹೆಡ್ ಬುಷ್ ಸಿನಿಮಾ ಇನ್ನೇನು ರಿಲೀಸ್ ಗೆ ರೆಡಿಯಾಗಿದೆ.. ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಬರೆದಿದ್ದು, ಹೊಸ ನಿರ್ದೇಶಕ ಶೂನ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಪಿಕ್ಷರ್ಸ್ ಮತ್ತು ಸೋಮಣ್ಣ ಟಾಕಿಸ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತಿ ಚಿತ್ರ ಹೆಡ್ ಬುಷ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಭೂಗತ ಲೋಕದ ಕಥೆಯನ್ನ ಹೇಳಲಿರುವ ಈ ಸಿನಿಮಾದಲ್ಲಿ ಡಾನ್ M P ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ರಿಲೀಸ್ ಆಗಿದ್ದು , ಡಾಲಿ ನಟನೆ ನೋಡಿ ಅವರನ್ನ ನಟ ರಾಕ್ಷಸನೇ ಅಂತಿದ್ದಾರೆ ನೆಟಿಜನ್ಸ್… ಡಾಲಿ ಜಯರಾಮನ ಪಾತ್ರಕ್ಕೆ ಪರ್ಫೆಕ್ಟ್ ಎನ್ನುತ್ತಿದ್ದಾರೆ.. ಡಾಲಿ ಹೀರೋ ಹಾಗೂ ವಿಲ್ಲನ್ ಎರೆಡೂ ಇಮೇಜ್ ನಲ್ಲೂ ಮಿಂಚು , ಆ ಪಾತ್ರಕ್ಕೆ ನ್ಯಾಯ ದಗಿಸುವ ಪ್ರತಿಭಾನ್ವಿತ ನಟ..
ಈ ಸಿನಿಮಾದಲ್ಲಿ ಒಂದ್ ರೀತಿ ಡಾಲಿ ವಿಲ್ಲನ್ ಹೀರೋ ಎಂದು ವರ್ಣಿಸಬಹುದು..
ಅಂದ್ಹಾಗೆ ಸಿನಿಮಾ ಈಗ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಹರಿದಾಡ್ತಿದೆ.. ಸಿನಿಮಾ ಬಿಡುಗಡೆಗೆ ಇನ್ನೂ ಎರೆಡು ದಿನಗಳು ಬಾಕಿಯಿರುವಾಗಲೇ ಸಿನಿಮಾ ಭಾರೀ ಮೊತ್ತಕ್ಕೆ ಸೇಲಾಗಿದೆ ಎನ್ನಲಾಗ್ತಿದೆ..
ಮೂಲಗಳ ಪ್ರಕಾರ ಸಿನಿಮಾದ ವಿತರಣ ಹಕ್ಕನ್ನ Zee ಸ್ಟುಡಿಯೋಸ್ ಸಂಸ್ಥೆಯು ಸುಮಾರು 22 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನಲಾಗಿದೆ.. ಅಲ್ಲದೇ ಕನ್ನಡ ಸಿನಿಮಾರಂಗದಲ್ಲಿ ಇದು ದೊಡ್ಡ ಮೊತ್ತ ಎಂದೇ ಚರ್ಚೆಯೂ ನಡೆಯುತ್ತಿದೆ..
ಅಂದ್ಹಾಗೆ ಸಿನಿಮಾ ಅಕ್ಟೋಬರ್ 21 ಕ್ಕೆ ಬಿಡುಗಡೆಯಾಗಲಿದ್ದು ಈಗಾಗಲೇ ಅಡ್ವಾನ್ಸ್ ಬುಕಿಂಗ್ ಕೂಡ ಆರಂಭವಾಗಿದೆ..