Kantara : ಪತ್ರಕರ್ತೆ ರೀತಿ ಪ್ರೇಕ್ಷಕರ ಬಳಿ ರಿವ್ಯೂ ಕೇಳಿದ ನಟಿ ಅವಂತಿಕಾ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ..!!!
ಯಾವ ಸಿನಿಮಾರಂಗದಲ್ಲಿ ನೋಡಿದರೂ ಕಾಂತಾರದ್ದೇ ಮಾತು… ಸೋಷಿಯಲ್ಲಿ ಮೀಡಿಯಾದಲ್ಲೂ ಕಾಂತಾರದ್ದೇ ಟಾಕು,..
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಕೂಡ ಇತೀಚೆಗೆ ಸಿನಿಮಾ ನೋಡಿ ರಿಷಬ್ ಶೆಟ್ಟಿ ಹಾಗೂ ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದರು..
ಅಂದ್ಹಾಗೆ ಮತ್ತೊಬ್ಬ ಕರಾವಳಿ ಸುಂದರಿ , ರಂಗೀತರಂಗ ಖ್ಯಾತಿಯ ಅವಂತಿಕ ಶೆಟ್ಟಿ ಇತ್ತೀಚೆಗೆ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಿದ್ದು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ.. ಜೊತೆಗೆ ಮಾಸ್ಕ್ ಧರಿಸಿ ಪತ್ರ ಕರ್ತೆ ರೀತಿ ಪ್ರೇಕ್ಷಕರ ಬಳಿ ರಿವ್ಯೂವ್ ಕೇಳಿ ನಂತರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ..
ಥಿಯೇಟರ್ ನಿಂದ ಹೊರ ಬರುತ್ತಿದ್ದಂತೆ ಅವಂತಿಕಾ ಶೆಟ್ಟಿ ಕ್ಯಾಮೆರಾ ಹಿಡಿದು ಮಾಸ್ಕ್ ಧರಿಸಿ ಪ್ರೇಕ್ಷಕರ ಬಳಿ ಪ್ರತಿಕ್ರಿಯೆ ಕೇಳಿದ್ದು ಪ್ರೇಕ್ಷಕರ ಪ್ರತಿಕ್ರಿಯೆ ವಿಡಿಯೋ ಹಂಚಿಕೊಂಡಿದ್ದಾರೆ..
ಕಾಂತಾರ ಚಿತ್ರಕ್ಕಾಗಿ ನಾನು ರಿಪೋರ್ಟರ್ ಆಗಿ ಬದಲಾದೆ. ಸಿನಿಮಾ ಬಗ್ಗೆ ಹೇಳಲು ಕೆಲವು ಮೆಚ್ಚುಗೆಯ ಮಾತುಗಳು ಸಾಕಾಗುವುದಿಲ್ಲ. ರಿಷಬ್ ಶೆಟ್ಟಿ ಈ ಸಿನಿಮಾ ನೀಡಿದ ಅನುಭವ ಎಂಥದ್ದು ಎಂದು ಹೇಳಲು ಪದಗಳು ಸಾಲುತ್ತಿಲ್ಲ. ನಿಜಕ್ಕೂ ಅತ್ಯದ್ಭುತ. ಇದು ತುಳುನಾಡಿನ ಜನರ ಹೆಮ್ಮೆಯ ವಿಷಯ ಎಂದು ಬರೆದುಕೊಂಡಿದ್ದಾರೆ.
Turned reporter for #KantaraMovie Few words of appreciation wont suffice 🙏@shetty_rishab can’t explain in words the experience, it’s so overwhelming and a matter of pride all the more for tulunadu people 🙌 pic.twitter.com/sag31ujDre
— Avantika Shetty (@avantikashetty1) October 17, 2022