ಕಾಂತಾರ ಸಿನಿಮಾ ಸೂಪರ್ ಹಿಟ್ ಆಗ್ತಿರುವ ಬೆನ್ನಲ್ಲೇ ಸಿನಿಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಚೇತನ್ ಅಹಿಂಸಾ ವಿರುದ್ಧ ತೀವ್ರ ಾಕ್ರೋಶ ವ್ಯಕ್ತವಾಗ್ತಿದೆ.. ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.. ಭೂತಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದ ಕಾರಣಕ್ಕೆ ಚೇತನ್ ಹೇಳಿಕೆಯನ್ನ ಹಲವರು ಖಂಡಿಸುತ್ತಿದ್ದಾರೆ..
ಇದೀಗ ಚಕ್ರವರ್ತಿ ಸೂಲೆಬೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು , ಕಾಂತಾರ ರೀತಿಯಲ್ಲಿ ತನ್ನ ಸಿನಿಮಾ ಹಿಟ್ಟಾಗಿಲ್ಲ ಎಂಬ ಹೊಟ್ಟೆ ಉರಿ ಚೇತನ್ ಅಹಿಂಸಾರಿಗೆ ಎಂದಿದ್ದಾರೆ..
ಖಾಸಗಿ ವಾಹಿನಿ ಜೊತೆಗೆ ಮಾತನಾಡಿರುವ ಅವರು ಚೇತನ್ ಒಬ್ಬ ನಟನೂ ಅಲ್ಲ ಎಡಪಂಥೀಯ ವ್ಯಕ್ತಿಯೂ ಅಲ್ಲ, ಅಂತೋರು ಬುಡಕಟ್ಟು ಜನಾಂಗದವರನ್ನು ಹಿಂದೂ ಧರ್ಮದಿಂದ ಬೇರೆ ಮಾಡುವ ಹುನ್ನಾರ ನಡೆಸಿದ್ದಾರೆ.
ಆದರೆ ಅವರಿಗೆ ಗೊತ್ತಿಲ್ಲ ಆದಿವಾಸಿ ಜನಾಂಗ, ದಲಿತ, ಹೀಗೆ ಎಲ್ಲರನ್ನೂ ಸೇರಿ ಹಿಂದೂ ಧರ್ಮವಾಗಿದೆ. ಆಕಾಶಕ್ಕೆ ಮುಖ ಮಾಡಿ ಉಗಳುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ..