Kantara : ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವ ರಿಷಬ್ ಶೆಟ್ಟಿ ಸಮರ್ಥನೆ ಒಪ್ಪುವುದಿಲ್ಲ – ಚೇತನ್
ಒಂದೆಡೆ ಕಾಂತಾರ ಅನ್ನೋ ಅಲೆ ದೇಶಾದ್ಯಂತ ಜನರನ್ನ ವರಿಸಿಬಿಟ್ಟಿದೆ.. ಸಿನಿಟೌನ್ ನಲ್ಲಿ ಕಾಂತಾರದ್ದೇ ಟಾಕಾಗಿದೆ..
ಕನ್ನಡ , ಹಿಂದಿ , ತಮಿಳು , ತೆಲುಗು , ಮಲತಯಾಳಂ ಎಲ್ಲಿ ನೋಡಿದ್ರು ಕಾಂತಾರದ್ದೇ ಸೌಂಡು.. ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಧೂಳೆಬ್ಬಿಸುತ್ತಿದೆ.. ರಿಷಬ್ ನಟನೆಗೆ ಜನ ಫಿದಾ ಆಗಿದ್ದಾರೆ.. ಭೂತಾರಾಧನೆ ದೈವಾರಾಧನೆಯ ಝಲಕ್ ಗೆ ಜನರು ಪುಳಕಿತರಾಗಿದ್ದಾರೆ..
ಕರಾವಳಿ ಸಂಸ್ಕೃತಿಗೆ ಥ್ರಿಲ್ ಆಗಿದ್ದಾರೆ..
ಸಿನಿಮಾ ಅದ್ಭುತ ಅಂತ ಹೇಳುತ್ತಿರುವವರ ನಡುವೆ ಒಂದಷ್ಟು ಅನ್ನೋಕಿಂತ ಬೆರಳೆಣಿಕೆ ಮಂದಿ ನೆಗೆಟಿವ್ ಆಗಿ ತಪ್ಪುಗಳನ್ನೇ ತೋರಿಸುವ ಪ್ರಯತ್ನದಲ್ಲಿದ್ದಾರೆ..
ಅಂದ್ಹಾಗೆ ಯಾವುದೇ ವಿಚಾರದಲ್ಲೂ ವಿವಾದಾತ್ಮಕವಾಗಿಯೇ ಮಾತನಾಡುವ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಇದೀಗ ಕಾಂತಾರ ಬಗ್ಗೆ ಮಾತನಾಡಿದ್ದು , ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ..
ಆದ್ರೆ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ ಬಹುಜನ ಸಂಪ್ರದಾಯಗಳು, ವೈದಿಕ, ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಇವರ ಪೋಸ್ಟ್ ಗೆ ಪರ ವಿರೋಧ ವ್ಯಕ್ತವಾಗ್ತಿದೆ..