Kantara : ಅನುಷ್ಕಾ ಶೆಟ್ಟಿಗಿಂತ ದೊಡ್ಡ ನಾಯಕಿಯರಾ..?? ಕಾಂತಾರ ನೋಡದ ರಶ್ಮಿಕಾಗೆ ಜನರ ತರಾಟೆ..!!
Kantara ಅಬ್ಬರ ನಿಲ್ಲೋ ಮಾತೇ ಇಲ್ಲ..!!! ಬಾಕ್ಸ್ ಆಫೀಸ್ ನಲ್ಲಿ ರಿಷಬ್ ಕಾಂತಾರದ್ದೇ ಆರ್ಭಟ..!!
ಅಂದ್ಹಾಗೆ ಸಿನಿಮಾಗೆ ಕನ್ನಡಿಗರು ಹೃದಯಲ್ಲಿ ಜಾಗ ಕೊಟ್ಟರು.. ಪರ ಭಾಷಿಗರು ಮನಸ್ಸಿನಿಂದ ಒಪ್ಪಿ ಹಾಡಿ ಹೊಗಳುತ್ತಿದ್ದಾರೆ..
ಸಿನಿಮಾಗೆ ತಾರೆಯರೂ ಫಿದಾ ಆಗಿದ್ದಾರೆ..
ಭೂತಾರಾಧನೆ ದೈವಾರಾಧನೆಯ ಝಲಕ್ ಗೆ ಜನರು ಪುಳಕಿತರಾಗಿದ್ದಾರೆ..
ಕರಾವಳಿ ಸಂಸ್ಕೃತಿಗೆ ಥ್ರಿಲ್ ಆಗಿದ್ದಾರೆ.. ಹಿಂದಿಯ ಸಿನಿಮಾಗಳನ್ನೂ ಮೀರಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾಂತಾರ ಮುಂದೆ ರಶ್ಮಿಕಾ ಸಿನಿಮಾಗೆ ಜನ ಟಾಟಾ ಗುಡ್ ಬೈ ಹೇಳಿದ್ದಾರೆ..
ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಕೂಡ ಇತೀಚೆಗೆ ಸಿನಿಮಾ ನೋಡಿ ರಿಷಬ್ ಶೆಟ್ಟಿ ಹಾಗೂ ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದರು..
ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿಯು , ನವರಸ ನಾಯಕ ಜಗ್ಗೇಶ್ ಕೂಡ ಸಿನಿಮಾವನ್ನ ಹಾಡಿಹೊಗಳಿದ್ದಾರೆ.. ಇತ್ತ ಬಾಲಿವುಡ್ ನ ಸ್ಟಾರ್ ನಟಿ ಕಂಗನಾ ರಣಾವತ್ ಸಿನಿಮಾ ನೋಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ..
ಆದ್ರೆ ಕರ್ನಾಟಕದವರೇ ಆದ ರಶ್ಮಿಕಾ , ಕರಾವಳಿಯವರಾದ ಪೂಜಾ ಹೆಗ್ಡೆ , ಕೃತಿ ಶೆಟ್ಟಿ ಸಿನಿಮಾ ನೋಡದಕ್ಕೆ ಅಸಮಾಧಾನ ಹೊರಹಾಕುತ್ತಿರುವ ಟ್ರೋಲಿಗರು ಈ ಮೂವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.. ಅಲ್ಲದೇ ರಶ್ಮಿಕಾರನ್ನ ಟ್ರೋಲ್ ಮಾಡುತ್ತಾ ಅನುಷ್ಕಾ ಶೆಟ್ಟಿಗಿಂತಲೂ ಸ್ಟಾರ್ ನಟಿಯಾ ಎಂದು ಟಾಂಟ್ ಮಾಡುತ್ತಿದ್ದಾರೆ..
ಈ ಹೇಳಿಕೆಗಳಿಗೆ ಪ್ರಮೋದ್ ಶೆಟ್ಟಿ ಅವರು ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ್ದು , ರಶ್ಮಿಕಾ ಅವರು ಬ್ಯುಸಿಯಾಗಿದ್ದಾರೆ.. ಅವರದ್ದೇ ಸಿನಿಮಾ ರಿಲೀಸ್ ಆಗಿದೆ,.. ಗುಡ್ ಬೈ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಿದ್ದಾರೆ ಬಿಡುವಾದಾಗ ಸಿನಿಮಾಗೆ ಪ್ರತಿಕ್ರಿಯೆ ನೀಡಬಹುದು.. ನೀವು ಸಿನಿಮಾ ನೋಡದೇ ಇರಬೇಡಿ ನೋಡಿ ಎಂದಿದ್ದಾರೆ..
ಅಂದ್ಹಾಗೆ ಸಿನಿಮಾ ನೋಡೋದು ಬೇಡ ಅಟ್ ಲೀಸ್ಟ್ ಒಂದು ಪೋಸ್ಟ್ ಹಾಕಲಿಲ್ಲ ಎಂಬುದು ನೆಟ್ಟಿಗರ ವಾದ.. ಅಂದ್ಹಾಗೆ ರಶ್ಮಿಕಾಗೆ ಈ ಸ್ಟಾರ್ ಡಮ್ ಸಿಗೋದಕ್ಕೆ ಕಾರಣ ಅವರ ಸಿನಿಮಾ ಸಕ್ಸಸ್ ಗೆ ಮೊದಲ ಮೆಟ್ಟಿಲೇ ರಿಷಬ್ ಶೆಟ್ಟಿ ಅವರ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ.. ಆದ್ರೆ ತಮ್ಮನ್ನ ಮೇಲೆ ಹತ್ತಲು ಸಹಾಯ ಮಾಡಿದ ಏನಿಯನ್ನೇ ಮರೆತಿದ್ದಾರೆ ರಶ್ಮಿಕಾ ಅನ್ನೋದೆ ಜನಾಕ್ರೋಶಕ್ಕೆ ಕಾರಣ..