ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ದಿನಗಳು ನಟ ಚೇತನ್ ಇದೀಗ ಎಲ್ಲಾ ಭಾಷೆಗಳಲ್ಲೂ ಸೂಪರ್ ಸಕ್ಸಸ್ ಕಾಣ್ತಿರುವ ಕಾಂತಾರ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ..
ರಿಷಬ್ ಶೆಟ್ಟಿ ಅವರು ಹೇಳಿರುವಂತೆ ದೈವಾರಾಧಾನೆ , ಭೂತಕೋಲ ನಮ್ಮ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿದ್ದರು..
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವರಾಹ ಎಂಬುದು ಸಂಸ್ಕೃತ ಪದ..
ವಿಷ್ಣುವಿನ ಅವತಾರ.. ವಿಷ್ಣು ಆರ್ಯರ ಅಂದ್ರೆ ಹಿಂದೂವಿನ ದೇವರು.. ನಮ್ಮ ಮೂಲ ನಿವಾಸಿಗಳ , ಪಂಬದ ಸಮುದಾಯದ ದೇವರುಗಳಲ್ಲ.. ಆದ್ರೆ ವಿಷ್ಣುವನ್ನ ದು ರೀತಿ ಪ್ರಬಲ ಜಾತಿಯವರು , ವರ್ಗದವರು ಅವರ ಧರ್ಮವನ್ನ ಬೆಳಸಲಿಕ್ಕೆ , ಅವರ ಧರ್ಮವನ್ನ ಒಳಗೆ ತೆಗೆದುಕೊಳ್ಳಲು ನಮ್ಮದು ಅಂತ ಹೇಳಲಿಕ್ಕೆ ವರಾಹ ನಮ್ಮ ವಿಷ್ಣುವಿನ ಅವತಾರ ಅಂತ ಹೇಳಿದ್ದಾರೆ ಎನ್ನಬಹುದು..
ಇದು ನೂರಾರು ವರ್ಷಗಳಿಂದ ಆಗುತ್ತಾ ಬಂದಿದೆ.. ಆದ್ರೆ ವರಾಹ ಎನ್ನುವುದು ಬೇರೆ, ಪಂಜುರ್ಲಿ ಎನ್ನುವುದು ಬೇರೆ ಎಂದು ಹೇಳಿದ್ದಾರೆ.. ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು , ವಿರೋಧವೇ ಹೆಚ್ಚಾಗಿ ವ್ಯಕ್ತವಾಗ್ತಿದೆ..