Kantara : ಪತ್ರಕರ್ತೆ ರೀತಿ ಪ್ರೇಕ್ಷಕರ ಬಳಿ ರಿವ್ಯೂ ಕೇಳಿದ ನಟಿ ಅವಂತಿಕಾ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ..!!!
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಕೂಡ ಇತೀಚೆಗೆ ಸಿನಿಮಾ ನೋಡಿ ರಿಷಬ್ ಶೆಟ್ಟಿ ಹಾಗೂ ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದರು..
ಆದ್ರೆ ಕೆಲವರು ನೆಗೆಟಿವ್ ಆಗಿಯೂ ಮಾತನಾಡ್ತಿದ್ದಾರೆ.. ‘ ಕಾಂತಾರ’ ಹಲವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದರೂ, ಚಿತ್ರದಲ್ಲಿ ಹಿಂದೂಯೇತರ ಸಂಸ್ಕೃತಿಗಳ ವಿನಿಯೋಗದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ತಮಿಳು ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕಾಂತಾರ ಸಿನಿಮಾದ ನಿರ್ದೇಶಿಸಿದ ಮತ್ತು ನಾಯಕ ರಿಷಬ್ ಶೆಟ್ಟಿ ಅವರು ಶೆಟ್ಟಿ – ದಕ್ಷಿಣ ಕನ್ನಡ ಪ್ರದೇಶದ ಭೂತ ಕೋಲ ಸಂಪ್ರದಾಯವು ಹಿಂದೂ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿದ್ದರು.. ಆದ್ರೆ ಹಲವರು ಇದನ್ನ ಒಪ್ಪಲು ತಯಾರಿಲ್ಲ..
ಆ ದೇವರುಗಳು, ಅವರೆಲ್ಲರೂ ನಮ್ಮ ಸಂಪ್ರದಾಯದ ಭಾಗವಾಗಿದ್ದಾರೆ. ಖಂಡಿತವಾಗಿ, ಇದು ಹಿಂದೂ ಸಂಸ್ಕೃತಿ ಮತ್ತು ಹಿಂದೂ ಆಚರಣೆಗಳ ಭಾಗವಾಗಿದೆ. ನಾನು ಹಿಂದೂ ಆಗಿರುವುದರಿಂದ ನನ್ನ ಧರ್ಮದ ಬಗ್ಗೆ ನನಗೆ ನಂಬಿಕೆ ಮತ್ತು ಗೌರವವಿದೆ. ಆದರೆ ಇತರರು ತಪ್ಪು ಎಂದು ನಾನು ಹೇಳುವುದಿಲ್ಲ. ನಾವು ಹೇಳಿರುವುದು ಹಿಂದೂ ಧರ್ಮದಲ್ಲಿರುವ ಅಂಶದ ಮೂಲಕ ಎಂದಿದ್ದರು ರಿಷಬ್..