ಕಾಂತಾರ ಸಿನಿಮಾ ಸೂಪರ್ ಸಕ್ಸಸ್ ಕಾಣ್ತಿದೆ.. ತೆಲುಗಿನಲ್ಲೇ ಸಿನಿಮಾದ ಅಬ್ಬರ ಹೆಚ್ಚಾಗಿಬಿಟ್ಟಿದೆ.. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಆರ್ಭಟಿಸುತ್ತಿದ್ದು , ಮಲಯಾಳಂ ನಲ್ಲಿ ಸಿನಿಮಾ ಅಕ್ಟೋಬರ್ 20 ಕ್ಕೆ ರಿಲೀಸ್ ಆಗಲಿದೆ..
ಈ ನಡುವೆ ಜನ ರಿಷಬ್ ಶೆಟ್ಟಿ ನಟನೆಯನ್ನ ಕೊಂಡಾಡುತ್ತಿದ್ದರೆ , ನಾರ್ತ್ ಆಡಿಯನ್ಸ್ ರಿಷಬ್ ಅವರ ಇತರೇ ಸಿನಿಮಾಗಳಿಗಾಗಿ ಸರ್ಚಿಂಗ್ ನಡೆಸುತ್ತಿದ್ದಾರೆ..
ಆದ್ರೆ ಸಂಚಲನ ಸೃಷ್ಟಿಸುವ ವಿಷಯ ಒಂದನ್ನ ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಕ ಅಲ್ಲು ಅರವಿಂದ್ ರಿವೀಲ್ ಮಾಡಿದ್ದು , ಫ್ಯಾನ್ಸ್ ಮಾತ್ರ ಭಾರೀ ಎಕ್ಸೈಟ್ ಆಗಿದ್ದಾರೆ..
ಹೌದು..! ಪ್ರೆಸ್ ಮೀಟ್ ನಲ್ಲಿಯೇ ರಿಷಬ್ ಜೊತೆಗೆ ಸಿನಿಮಾ ಘೋಶಿಸಿದ್ದಾರೆ.. ಅಂದ್ಹಾಗೆ ಅಲ್ಲು ಅರವಿಂದ್ ಸಿನಿಮಾದ ತೆಲುಗು ವರ್ಷನ್ ವಿತರಣಾ ಹಕ್ಕು ಖರೀದಿ ಮಾಡಿದ್ದರು.. ತೆಲುಗಿನಲ್ಲಿ ಸಿನಿಮಾ ಭರ್ಜರಿ ಹಿಟ್ ಕಾಣುತ್ತಿದ್ದಂತೆ ಸಕ್ಸಸ್ ಮೀಟ್ ನಡೆಸಿದ್ದಾರೆ.. ಇಲ್ಲಿಯೇ ರಿಷಬ್ ಜೊತೆಗೆ ಸಿನಿಮಾ ಘೋಷಿಸಿದ್ದಾರೆ..
ಅಂದ್ಹಾಗೆ ಸಿನಿಮಾಗೆ ರಿಷಬ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದೂ ಚರ್ಚೆಯಾಗ್ತಿದೆ.. ಆದ್ರೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ..