Kantara : ತುಳು ಭಾಷೆಯಲ್ಲಿ ಬರಲಿದೆ ರಿಷ್ಬ್ ಶೆಟ್ಟಿ ಕಾಂತಾರ..!!
ಯಾವ ಸಿನಿಮಾರಂಗದಲ್ಲಿ ನೋಡಿದರೂ ಕಾಂತಾರದ್ದೇ ಮಾತು… ಸೋಷಿಯಲ್ಲಿ ಮೀಡಿಯಾದಲ್ಲೂ ಕಾಂತಾರದ್ದೇ ಟಾಕು,..
ಕಾಂತಾರದ್ದೇ ಗುಣಗಾನ.. ಕಾಂತಾರ ಗುಂಗಿನಿಂದ ಹೊರಬರಲೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಕಾಂತಾರ ಆವರಿಸಿದೆ.. ಕಾಂತಾರ ಒಂದು ಸಿನಿಮಾವಲ್ಲ.. ಅದೊಂದು ಎಮೋಷನ್.. ಕರಾವಳಿ ಸಂಸ್ಕೃತಿ , ಭೂತಾರಾಧಾನೆ , ದೈವಾರಾಧನೆಯ ಕಥೆಯೇ ಕಾಂತಾರ..
ತುಳುನಾಡಿನ ಸಂಸ್ಕೃತಿಯನ್ನ ಸಿನಿಮಾ ಮೂಲಕ ತೋರಿಸಿಕೊಡಲಾಗಿದೆ.. ಕನ್ನಡದಲ್ಲಿ ಸಿನಿಮಾ ಭಾರೀ ಸೌಂಡ್ ಮಾಡಿತ್ತು.. ಇತರೇ ರಾಜ್ಯಗಳಲ್ಲೂ ಕನ್ನಡದಲ್ಲೇ ಸಿನಿಮಾವನ್ನ ನೋಡಿ ಜನರು ಹೊಗಳಿದ್ದರು.. ಸಿನಿಮಾದ ಕ್ರೇಜ್ ನೋಡಿ ಇತರೇ ಭಾಷೆಗಳಿಗೂ ಸಿನಿಮಾ ರಿಲೀಸ್ ಆಗಿದೆ..
ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಕೂಡ ಇತೀಚೆಗೆ ಸಿನಿಮಾ ನೋಡಿ ರಿಷಬ್ ಶೆಟ್ಟಿ ಹಾಗೂ ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದರು..
ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿಯು , ನವರಸ ನಾಯಕ ಜಗ್ಗೇಶ್ ಕೂಡ ಸಿನಿಮಾವನ್ನ ಹಾಡಿಹೊಗಳಿದ್ದಾರೆ.. ಇತ್ತ ಬಾಲಿವುಡ್ ನ ಸ್ಟಾರ್ ನಟಿ ಕಂಗನಾ ರಣಾವತ್ ಸಿನಿಮಾ ನೋಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ..
ಅಂದ್ಹಾಗೆ ಈ ಸಿನಿಮಾವನ್ನ ಇದೀಗ ತುಳುವಿಗೂ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದ್ಯಂತೆ..
ಆದ್ರೆ ಯಾವ ದಿನಾಂಕದಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ..
ಇದನ್ನೂ ಓದಿ : https://cinibazaar.com/2022/10/19/kantara-avantika-shetty-cinibazaar