Ramcharan – Allu Arjun ಅಲ್ಲು ಅರ್ಜುನ್ ರಾಮ್ ಚರಣ್…. ಸೌತ್ ನ ಇಬ್ಬರು ಸ್ಟಾರ್ ನಟರು… ಆದ್ರೆ ಈಗ ಇಬ್ಬರೂ ಟಾಲಿವುಡ್ ಅಥವ ಸೌತ್ ಇಂಡಸ್ಟ್ರಿಗಷ್ಟೇ ಸೀಮಿತವಾಗಿಲ್ಲ.. ಭಾಷಾ ಅಂತರ ಮೀರಿ , ಸೌತ್ ನಾರ್ತ್ ಅನ್ನುವ ಎಲ್ಲೆ ಮೀರಿ ಭಾರತೀಯ ಸಿನಿಮಾರಂಗದ ಸ್ಟಾರ್ ಹೀರೋಗಳಾಗಿ ಬೆಳೆದು ದೇಶಾದ್ಯಂತ ಅಭಿಮಾನಿಗಳನ್ನ ಗಳಿಸಿದ್ದಾರೆ..
RRR ಮೂಲಕ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮಿಂಚಿದ್ರೆ , ಪುಷ್ಪರಾಜನ ಕ್ರೇಜ್ ಗೆ ಇಂಡಿಯನ್ಸ್ ಫಿದಾ ಆಗುವಂತೆ ಮಾಡಿದವರು ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್.. ಇಬ್ಬರ ಭ್ಯಾನ್ ಬೇಸ್ ಬೇರೆ.. ಮ್ಯಾನರಿಸಮ್ ಬೇರೆ.. ಕ್ರೇಜ್ ಬೇರೆ.. ಆದ್ರೆ ಇಬ್ಬರೂ ಮಾಸ್ ಹೀರೋಗಳೇ … ಮೆಗಾ ಪರಿವಾರದವರು..
ಇದೀಗ ಇವರಿಬ್ಬರ ಫ್ಯಾನ್ಸ್ ಗೆ ಎಕ್ಸೈಟಿಂಗ್ ನ್ಯೂಸ್ ಸಿಕ್ಕಿದೆ..
ಅಂದ್ಹಾಗೆ ಈ ಇಬ್ಬರೂ ಸ್ಟಾರ್ ಗಳು , ಮಲ್ಟಿಸ್ಟಾರರ್ ಸಿನಿಮಾದಲ್ಲಿ ಒಂದಾಗ್ತಿದ್ದಾರೆ ಅನ್ನೋ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದೆ..
ಅಷ್ಟೇ ಅಲ್ಲ ಟೈಟಲ್ ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ..
ಅಂದ್ಹಾಗೆ ಈಗಾಗಲೇ ಎವುಡು ಸಿನಿಮಾದಲ್ಲಿ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು , ಈ ಸಿನಿಮಾ ಸೂಪರ್ ಹಿಟ್ ಆಗಿತ್ತು ಕೂಡ..
ಇದಾದ ಬಳಿಕ ಮತ್ತೊಮ್ಮೆ ಇಬ್ಬರು ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಳ್ಳಬೇಕೆಂಬ ಅಭಿಮಾನಿಗಳ ಬಯಕೆ ಶೀಘ್ರವೇ ಈಡೇರುವಂತೆ ಕಾಣುತ್ತಿದೆ..
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.. ಕಳೆದ 10 ವರ್ಷಗಳಿಂದ ಇಂತಾದೊಂದು ಆಸೆ ಇದೆ. ನಮ್ಮದೇ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಂದ್ಹಾಗೆ ಈ ಸಿನಿಮಾಗೆ ಚರಣ್ ಅರ್ಜುನ್ ಎನ್ನುವ ಟೈಟಲ್ ಫಿಕ್ಸ್ ಮಾಡಲಾಗಿದೆ ಎನ್ನಲಾಗ್ತಿದೆ.. 10 ವರ್ಷಗಳ ಹಿಂದೆಯೇ ಫಿಲ್ಮ್ ಚೇಂಬರ್‌ನಲ್ಲಿ ಈ ಟೈಟಲ್ ರಿಜಿಸ್ಟರ್ ಮಾಡಿಸಿದ್ದೀನಿ. ಪ್ರತಿ ವರ್ಷ ಅದನ್ನು ರಿನೀವಲ್ ಮಾಡಿಸುತ್ತಿದ್ದೀನಿ, ಒಂದಲ್ಲ ಒಂದು ದಿನ ಈ ಪ್ರಾಜೆಕ್ಟ್ ಶುರುವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಒಟ್ನಲ್ಲಿ ಈ ಇಬ್ಬರ ಸಿನಿಮಾ ಶುರುವಾಗಲಿ ಎಂದು ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಿದ್ದಾರೆ…