Ajith Kumar : ಒಂದೂವರೆ ವರ್ಷ ಅಜಿತ್ ಸಿನಿಮಾ ಮಾಡಲ್ಲ..!!!
ತಮಿಳಿನ ಸ್ಟಾರ್ ನಟ ಅಜಿತ್ ಅವರು ಒಂದು ಒಂದೂ ವರೆ ವರ್ಷ ಸಿನಿಮಾ ಮಾಡೋದಿಲ್ಲ ಬ ಸುದ್ದಿ ಹರಿದಾಡ್ತಿದ್ದು , ಅಭಿಮಾನಿಗಳಿಗೆ ಶಾಕ್ ಆಗಿದೆ.. ತಮಿಳಿನಲ್ಲಿ ತಲಾ ಅಜಿತ್ ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ..
ದೊಡ್ಡ ಫ್ಯಾನ್ ಬೇಸ್ ಇದೆ.. ಆದ್ರೆ ಬೈಕ್ ಕ್ರೇಜ್ ಹೊಂದಿರುವ ಅಜಿತ್ ಇದೀಗ ತಮ್ಮ ಬೈಕ್ ನಲ್ಲಿ ವಿಶ್ವ ಪರ್ಯಟನೆಗೆ ಹೊರಟಿದ್ದು , ಸುಮಾರು ಒಂದೂವರೆ ವರ್ಷ ಸಿನಿಮಾ ಮಾಡೊದಿಲ್ಲ ಎನ್ನಲಾಗ್ತಿದೆ..
18 ತಿಂಗಳ ಕಾಲ ಬೈಕ್ ನಲ್ಲಿ ಪ್ರಪಂಚ ಸುತ್ತಲಿದ್ದಾರಂತೆ ಅಜಿತ್.. 7 ಖಂಡಗಳ ಸುತ್ತಾ 16 ದೇಶಗಳನ್ನ ಸುತ್ತಲಿದ್ದಾರಂತೆ..
ವಿಘ್ನೇಶ್ ಜೊತೆಗೆ ಸದ್ಯ Ak52 ಸಿನಿಮಾ ಮಾಡುತ್ತಿದ್ದು , ಈ ಸಿನಿಮಾ ಮುಗಿದ ನಂತರವಷ್ಟೇ ದೇಶ ಪರ್ಯಟನೆಗೆ ಅಜಿತ್ ತೆರಳಲಿದ್ದಾರೆ..