ಬಿಗ್ ಬಾಸ್ ಕನ್ನಡ ಸೀಸನ್ 9 ನಾಲ್ಕನೇ ವಾರದಲ್ಲಿದ್ದು , ನಾಲ್ಕನೇ ವಾರ ದೀಪಿಕಾ ದಾಸ್ ಕ್ಯಾಪ್ಟನ್ ಆಗಿದ್ದಾರೆ.. ಅಲ್ಲದೇ ಸೀಸನ ನ ಮೊದಲ ಮಹಿಳಾ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.. ಆದ್ರೆ ಕ್ಯಾಪ್ಟನ್ ದೀಪಿಕಾ ದಾಸ್ ವಿರುದ್ಧ ರೂಪೇಶ್ ರಾಜಣ್ಣ ಸಿಟ್ಟಾಗಿದ್ದಾರೆ..
ಈ ಬಾರಿ ಗುಂಪಿಗೆ ಸೇರದ ಪದವನ್ನ ಗ್ರಹಿಸುವ ಟಾಸ್ಕ್ ಅನ್ನು ಎರಡು ತಂಡಗಳಿಗೆ ನೀಡಲಾಗಿತ್ತು.. ಒಂದು ತಂಡದಲ್ಲಿ ರೂಪೇಶ್ ರಾಜಣ್ಣ ಮತ್ತೊಂದು ಟೀಮ್ ನಲ್ಲಿ ಪ್ರಶಾಂತ್ ಸಂಬರ್ಗಿ ಇದ್ದರು.. ಗುಂಪಿಗೆ ಸೇರದ ಪದ ಯಾವುದು ಎಂಬುದನ್ನ ಎರಡು ತಂಡಗಳು ತಿಳಿಸಬೇಕಿತ್ತು. ದೀಪಿಕಾ ದಾಸ್ ಸರಿ ಉತ್ತರಕ್ಕೆ ಸಮ್ಮತಿ ಸೂಚಿಸಬೇಕು. ಈ ವೇಳೆ ದೀಪಿಕಾ ದಾಸ್ ನಿರ್ಧಾರಕ್ಕೆ ರೂಪೇಶ್ ರಾಜಣ್ಣ ಆಕ್ರೋಶಗೊಂಡಿದ್ದಾರೆ..
ರೂಪೇಶ್ ರಾಜಣ್ಣ ಟೀಮ್ ಆಡುವಾಗ ಕೆಲವೊಂದು ಪ್ರಶ್ನೆಗಳಿಗೆ ದೀಪಿಕಾ ಅಂಕಗಳನ್ನ ಕೊಟ್ಟಿರಲಿಲ್ಲ. ಸಂಬರ್ಗಿ ತಂಡಕ್ಕೆ ಅಂಕಗಳನ್ನ ನೀಡಿರುವುದು ರೂಪೇಶ್ ರಾಜಣ್ಣ ಅವರ ಬೇಸರಕ್ಕೆ ಕಾರಣವಾಗಿದೆ.
ಅಲ್ಲದೇ ಎದುರಾಳಿ ತಂಡಕ್ಕೆ ದೀಪಿಕಾ ದಾಸ್ ಬೆಂಬಲಿಸುತ್ತಿದ್ದಾರೆ ಎಂದು ರಾಜಣ್ಣ ಆರೋಪ ಮಾಡಿದ್ದಾರೆ. ದೀಪಿಕಾ ದಾಸ್ ನಡೆಗೆ ರೂಪೇಶ್ ರಾಜಣ್ಣ ತಂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೂಪೇಶ್ ರಾಜಣ್ಣ, ದೀಪಿಕಾ ಖಡಕ್ ಮಾತಿನಿಂದ ಸಿಟ್ಟಾಗಿ ಟಾಸ್ಕ್ ಇಂದ ವಾಕ್ ಔಟ್ ಆಗಿದ್ದಾರೆ.