BiggBoss Kannada 9 – ಸೋನು ಗೌಡ ದೊಡ್ಮನೆ ಪ್ರವೇಶ..!!!
ಬಿಗ್ ಬಾಸ್ ಒಟಿಟಿಯಲ್ಲಿ ಗಮನ ಸೆಳೆದಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಟ್ರೋಲಿಗರ ಫೇವರೇಟ್ ಸೋನು ಗೌಡ ಟಿಟಿಯಲ್ಲೇ ತಮ್ಮ ಜರ್ನಿ ಕೊನೆಗೊಳಿಸಿದರು..
ಆದ್ರೀಗ ಟಿವಿ ಬಿಗ್ ಬಾಸ್ ಗೆ ಬರಲಿದ್ದಾರೆಂಬ ಸುದ್ದಿ ಹರಿದಾಡ್ತಿದೆ..
ಹೌದು..!
ಒಟಿಟಿಯಲ್ಲಿ ಫಿನಾಲೆ ತಲುಪಿದ್ದ ಸೋನು ಗೌಡ , ಈಗ ಮತ್ತೆ ಟಿವಿ ಬಿಗ್ ಬಾಸ್ ಬರಲಿದ್ದಾರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎಂಬ ಸುದ್ದಿ ಹರಿದಾಡ್ತಿದೆ.. ಆದರೆ ಇದು ಎಷ್ಟರ ಮಟ್ಟಿಗೆ ನಿಜವಾಗುತ್ತೆ ಅನ್ನೋದು ಅಧಿಕೃತವಾಗಿ ಬಿಗ್ ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯನ್ನ ರಿವೀಲ್ ಮಾಡುವ ಸಂದರ್ಭದಲ್ಲೇ ಗೊತ್ತಾಗಲಿದೆ..
ಸದ್ಯಕ್ಕೆ ನಾಲ್ಕನೇ ವಾರಕ್ಕೆ ಬಿಗ್ ಬಾಸ್ ತಲುಪಿದೆ.. ಅಂದ್ರೆ 6 ಅಥವ 7 ಇಲ್ಲ 8 ನೇ ವರಾದಲ್ಲಂತೂ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.. ಹೆಚ್ಚಾಗಿ ಚರ್ಚೆಯಾಗ್ತಿರುವ ಹೆಸರೇ ಸೋನು ಗೌಡ ಅವರದ್ದಾಗಿದೆ..