Zombie ಸಿನಿಮಾಗೆ ಜೋಗಿ ಪ್ರೇಮ್ ಹೀರೋ..!!! ಧ್ರುವ ಸಿನಿಮಾ ಕಥೆಯೇನು..??
ಜೋಗಿ ಪ್ರೇಮ್ ನಟನೆ ಮಾಡಿ ಅಂದಾಜು ಐದಾರು ವರ್ಷಗಳೇ ಕಳೆದುಹೋಗಿದೆ.. ನಿರ್ದೇಶಕರಾಗಿ ಬ್ಯುಸಿಯಾಗಿರುವ ಪ್ರೇಮ್ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನದ ಬ್ಯುಸಿಯಲ್ಲಿದ್ದಾರೆ.. ಈ ಸಿನಿಮಾದ ಟೈಟಲ್ ಅಕ್ಟೋಬರ್ 20 ಕ್ಕೆ ಲಾಂಚ್ ಆಗಲಿದೆ..
ಈ ನಡುವೆ ಜೋಗಿ ಪ್ರೇಮ್ ಸಿನಿಮಾದಲ್ಲಿ ನಟನೆ ಮಾಡೋದಕ್ಕೆ ಮನಸ್ಸು ಮಾಡಿದ್ದಾರಂತೆ.. ಅದ್ರಲ್ಲೂ ವಿಶೇಷವಾಗಿ ಙೋಂಬಿ ಸಿನಿಮಾದಲ್ಲಿ ಅನ್ನೋದು ಗಮನಿಸಬೇಕಾದ ವಿಚಾರವಾಗಿದೆ..
ಹಾಗೆ ನೋಡೋದಾದ್ರೆ ಪ್ರೇಮ್ ಅವರ ನಟನೆಯ ಸಿನಿಮಾಗಳು ಸದಾ ಡಿಫರೆಂಟ್ ಆಗಿಯೇ ಇರುತ್ತೆ.. ಇದೀಗ ಸೌತ್ ನಲ್ಲಿ ಙೋಂಬಿ ಸಿನಿಮಾ ತೆಗೆಯುವ ಸಾಹಸವನ್ನ ಮಾಡಿದ್ದಾರೆ…
ಹಾಗೆ ನೋಡಿದ್ರೆ ವಿದೇಶಿ ಝೋಂಬಿ ಸಿನಿಮಾಗಳು ಹೆಚ್ಚು ಬರುತ್ತದೆ.. ಭಾರತದಲ್ಲಿ ಕಡಿಮೆಯೇ.. ಅದ್ರಲ್ಲೂ ಸೌತ್ ನಲ್ಲಿ ಬಂದಿರೋದು ಒಂದೋ ಎರೆಡೋ ಸಿನಿಮಾಗಳು ಅಷ್ಟೇ..
ಇದೀಗ ಸೌತ್ ನಲ್ಲಿ ಙೋಂಬಿ ಸಿನಿಮಾದಲ್ಲಿ ನಟಿಸೋಕೆ ಮುಂದಾಗಿದ್ದಾರೆ ಪ್ರೇಮ್.. ಅಂದ್ಹಾಗೆ ಇದೊಂದು ಬಿಗ್ ಬಜೆಟ್ ಸಿನಿ
ಮಾಗಿರಲಿದ್ಯಂte.. ಭರ್ಜರಿ ವಿಎಫ್ ಎಕ್ಸ್ ನೂ ಬಳಸಲಾಗುತ್ತದೆಯಂತೆ.. ಅಲ್ಲದೇ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ.. ಹೀಗಾಗಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ..
ಆದ್ರೆ ಧ್ರುವ ಸರ್ಜಾ ಅವರ ಜೊತೆಗೂ ಜೋಗಿ ಪ್ರೇಮ್ ಸಿನಿಮಾ ಘೋಷಣೆ ಮಾಡಿದ್ದಾರೆ.. ಕೆವಿಎನ್ ಸಂಸ್ಥೆ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾವನ್ನು ಪ್ರೇಮ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಕಥೆಯೇನು..??? ಅಪ್ ಡೇಟ್ ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳದ್ದು.. ಸದ್ಯ ಧ್ರುವ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..