Kangana Ranouth : ತಲೈವಿ ನಂತರ ಮತ್ತೊಂದು ಬಯೋಪಿಕ್ ನಲ್ಲಿ ಬಾಲಿವುಡ್ ‘ಕ್ವೀನ್’
ತಲೈವಿ, ಮತ್ತು ಬಿಡುಗಡೆಗೆ ಸಿದ್ದವಾಗಿರುವ ಎಮರ್ಜೆನ್ಸಿ ಚಿತ್ರದ ನಂತರ ಮತ್ತೊಮ್ಮೆ ಬಯೋಪಿಕ್ ಗಳಲ್ಲಿ ನಟಿಸಲು ಕಂಗಾನ ರಾಣಾವತ್ ಮುಂದಾಗಿದ್ದಾರೆ. ಬಂಗಾಳದ ಜನಪ್ರಿಯ ರಂಗಭೂಮಿ ಕಲಾವಿದೆ ನೋತಿ ಬಿನೋದಿನಿ ಅವರ ಜೀವನ ಚರಿತ್ರೆಗೆ ಕಂಗಾನ ಬಣ್ಣ ಹಚ್ಚಲು ಮುಂದಾಗಿದ್ದಾರೆ.
ನೋತಿ ಬಿನೋದಿನಿ ಕೋಲ್ಕತ್ತಾದಲ್ಲಿ ವೇಶ್ಯಾವಾಟಿಕೆ ಸಮಾಜದಲ್ಲಿ ಜನಿಸಿದವರು. 12 ನೇ ವಯಸ್ಸಿನಲ್ಲಿ ನಟನಾ ವೃತ್ತಿಯನ್ನ ಪ್ರಾರಂಭಿಸಿ 23 ನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನವನ್ನ ತೊರೆದಿದ್ದರು.
ಬಿನೋದಿನಿ ಕುಟುಂಬ ಕಡು ಬಡತನದಿಂದ ಜೀವಿಸುತ್ತಿದ್ದ ಕಾರಣ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲ, ಬಿನೋದಿನಿ ತನ್ನ ಜೀವನಚರಿತ್ರೆಯಲ್ಲಿ ತನ್ನನ್ನು ತಾನು ವೇಶ್ಯೆ ಎಂದು ಸ್ವತಃ ಕರೆದುಕೊಂಡಿದ್ದಾರೆ. ನೋತಿ ಬಿನೋದಿನಿ 5 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಾದರೂ ತನ್ನ ಗಂಡನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ.
ಗ್ರೇಟ್ ನ್ಯಾಶನಲ್ ಥಿಯೇಟರ್ನಲ್ಲಿ ದ್ರೌಪದಿಯ ಸಣ್ಣ ಪಾತ್ರದ ಮೂಲಕ ಬಿನೋದಿನಿ ಪಾದಾರ್ಪಣೆ ಮಾಡಿದರು. ಬಂಗಾಳ ರಂಗಭೂಮಿಯಲ್ಲೂ ಕೆಲಸ ಮಾಡಿದ್ದರು. ಪ್ರಸಿದ್ಧ ನಟ ಮತ್ತು ನಾಟಕ ಬರಹಗಾರ ಗಿರಿ ಚಂದ್ರ ಘೋಷ್ ಅವರಿಂದ ನಟನೆಯನ್ನ ಕಲಿತು 1883 ರಲ್ಲಿ ಒಟ್ಟಿಗೆ ಸ್ಟಾರ್ ಥಿಯೇಟರ್ ಅನ್ನು ಪ್ರಾರಂಭಿಸಿದ್ದರು. ಬಿನೋದಿನಿ ಉತ್ತಮ ನಟಿಯಾಗಿದ್ದರೂ ಸಹ ಸಮಾಜದಿಂದ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದರು.
ನೋತಿ ಬಿನೋದಿನಿ ಬರವಣಿಗೆಯ ಹವ್ಯಾಸವನ್ನೂ ಹೊಂದಿದ್ದರು. ಅವರ ಸ್ವಂತ ಆತ್ಮಚರಿತ್ರೆ ಅಮರ್ ಕಥಾವನ್ನ ಅವರೇ ಬರೆದುಕೊಂಡಿದ್ದಾರೆ. ಇದಲ್ಲದೇ ಅನೇಕ ಕವನಗಳು ಮತ್ತು ಕಥೆಗಳನ್ನ ಸಹ ಬರೆದುಕೊಂಡಿದ್ದಾರೆ. ಬಿನೋದಿನಿ ಹಲವು ಬಾರಿ ಜೀವನದಲ್ಲಿ ಮೋಸ ಹೋಗಿದ್ದು ಆನಂತರವೇ ರಂಗಭೂಮಿಯಲ್ಲಿಯೇ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ನೋತಿ ಬಿನೋದಿನಿ ಒಬ್ಬ ಮಗಳಿದ್ದರಾದರೂ 12 ವಯಸ್ಸಿಗೆ ಇಹಲೋಕ ತ್ಯಾಜಿಸಿದ್ದರು. ನಟಿ ಸಹ ತನ್ನ 41ನೇ ವಯಸ್ಸಿನಲ್ಲಿ ನಿಧನರಾರು..
ಇನ್ನೂ ಕಂಗನಾ ಬಯೋಪಿಕ್ ಚಿತ್ರಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರಂತೆ. ಜಯಲಲಿತಾ ನಂತರ ಕಂಗನಾ ಈಗ ಇಂದಿರಾಗಾಂಧಿ ಆಧಾರಿತ ಎಮರ್ಜೆನ್ಸಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ನಂತರ ಮತ್ತೆ ನಾತಿ ಬಿನೋದಿನಿ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನಟಿ ಬಿನೋದಿನಿ’ ಸಿನಿಮಾವನ್ನು ಪರಿಣೀತಾದಂತಹ ಅದ್ಧೂರಿ ಸಿನಿಮಾ ಮಾಡಿದ ಪ್ರದೀಪ್ ಸರ್ಕಾರ್ ಮಾಡುತ್ತಿದ್ದಾರೆ.