Kantara 2 ಬರೋದು ಪಕ್ಕಾನಾ..?? ಪ್ರಮೋದ್ ಶಿಟ್ಟಿ ಕೊಟ್ಟ ಸುಳಿವೇನು..??
ದೇಶಾದ್ಯಂತ ಹೊಸ ಅಲೆ ಸೃಷ್ಟಿ ಮಾಡಿರುವ ಕನ್ನಡದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದೆ…
ಅಂದ್ಹಾಗೆ ಈ ಸಿನಿಮಾದ ಪಾರ್ಟ್ 2 ಬಗ್ಗೆ ಸದ್ಯಕ್ಕೆ ಭಾರೀ ಚರ್ಚೆಯಾಗ್ತಿದೆ.. ಕಾಂತಾರ ಪಾರ್ಟ್ 2 ಬರಲಿದ್ಯಾ..?? ಎಂಬ ಮಾತುಗಳಾರಂಭವಾಗಿದೆ..
ಈ ಬಗ್ಗೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಪ್ರಮೋದ್ ಶೆಟ್ಟಿ ಒಂದು ಸುಳಿವನ್ನ ಬಿಟ್ಟುಕೊಟ್ಟಿದ್ದಾರೆ..
ಸಿನಿಮಾದಲ್ಲಿ ವಿಲ್ಲನ್ ಆಗಿರುವ ಪ್ರಮೋದ್ ಅವರು ಕುತಂತ್ರಿ ರಾಜಕಾರಣಿಯಾಗಿಯೇ ಕೊನೆವರೆಗೂ ಕಾಣಿಸಿಕೊಂಡಿದ್ದಾರಾದ್ರೂ ಕೊನೆಯಲ್ಲಿ ಅವರೂ ಕೂಡ ಬದಲಾಗುತ್ತಾರೆ..
ಸದ್ಯ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ್ರೆ ಪಾರ್ಟ್ 2 ಬರುತ್ತಾ ಎಂಬ ಅನುಮಾನವಂತೂ ಮೂಡಿದೆ..
ಕಾಂತಾರ ಪಾರ್ಟ್ 2 ತೆರೆಯ ಮೇಲೆ ಬರಲಿದೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ. ಸದ್ಯ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ..