Kantara : ಕಾಂತಾರ ಮುಂದೆ ನಡೆಯುತ್ತಾ ಬಾಲಿವುಡ್ ಸಿನಿಮಾಗಳ ಆಟ..??
ಬಾಲಿವುಡ್ ಸಿನಿಮಾಗಳ ಮುಂದೆ ಸೌತ್ ಸಿನಿಮಾಗಳು ರಿಲೀಸ್ ಆದ್ರೆ ಬಾಲಿವುಡ್ ಗೆ ಏನೂ ತೊಂದರೆಯಾಗದ ಕಾಲವೊಂದಿತ್ತು.. ಆಧ್ರೀಗ ಅದು ಅದು ಹಳೆಯ ಕಾಲ..
ಈಗೇನಿದ್ರೂ ಸೌತ್ ಸಿನಿಮಾಗಳ ಅಬ್ಬರ ಮಾತ್ರ.. ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ.. ಅದು ಕೂಡ ಸೌತ್ ಸಿನಿಮಾಗಳ ಮುಂದೆ ಯಾವುದೇ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳ ಟ ಕೂಡ ನಡೆಯುತ್ತಿಲ್ಲ..
ಅದ್ರಲ್ಲೂ ಸೋತುಸುಣ್ಣವಾಗಿದ್ದ ಬಾಲಿವುಡ್ ಗೆ ಜೀವ ಕೊಟ್ಟ ಬ್ರಹ್ಮಾಸ್ತ್ರಕ್ಕೆ ಸರಿಯಾಗಿ ಟಕ್ಕರ್ ಕೊಡೋದಕ್ಕೆ ಯಾವುದೇ ಸೌತ್ ಸಿನಿಮಾಗಳು ಇರಲಿಲ್ಲ..
ಹೀಗಾಗಿ ಆ ಸಿನಿಮಾ ಆ ಲೆವೆಲ್ ಆರ್ಭಟಿಸಿತು ಅನ್ನೋದು ಸಿನಿಪಂಡಿತರ ಲೆಕ್ಕಾಚಾರ.. ಆದ್ರೀಗ ಕಾಂತಾರ ಸಿನಿಮಾವಿದೆ.. ಕ್ರೇಜ್ ಇದೆ.. ಎಲ್ಲಾ ಭಾಷೆಗಳಲ್ಲೂ ಕಾಂತಾರ ಹವಾ ಜೋರಾಗಿದೆ.. ಬಾಕ್ಸ್ ಆಫೀಸ್ ನಲ್ಲಿ ಕಾಂತಾರದ್ದೇ ಡಾಮಿನೇಷನ್ ಆಗಿದೆ.. ಕಾಂತಾರ ಮುಂದೆ ರಶ್ಮಿಕಾ ಗುಡ್ ಬೈಗೂ ಜನ ಟಾಟಾ ಬೈ ಬೈ ಹೇಳಾಯ್ತು..
ಪರಿಣಿತಿ ಚೋಪ್ರಾ ಕೋಡ್ ನೇಮ್ ತಿರಂಗಾ ಫ್ಲಾಪ್ ಆಯ್ತು.. ಡಾಕ್ಟರ್ ಜಿ ಸಾಧಾರಣ ಪ್ರದರ್ಶನ ಕಾಣ್ತಿದೆ..
ಆದ್ರೆ ಕಾಂತಾರ ಅಬ್ಬರಿಸಿ ಬೊಬ್ಬಿರಿಯುತ್ತಿದೆ.. ಹಿಂದಿ ವರ್ಷನ್ ಒಂದ್ರಲ್ಲಿ ಸುಮಾರು 11 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ..
ಅಂದ್ಹಾಗೆ ಕಾಂತಾರ ಅಬ್ಬರ ಸದ್ಯಕ್ಕಂತೂ ತಗ್ಗುವುದಿಲ್ಲ…
ಇನ್ನೂ 10 ರಿಂದ 15 ದಿನಗಳು ಅಂದ್ರೆ ದೀಪಾವಳಿ ಸಮಯದಲ್ಲಿ ಸಿನಿಮಾ ಆರ್ಭಟ ಮುಂದುವರೆಯಲಿದ್ದು , ಬ್ಯಾಕ್ ಟು ಬ್ಯಾಕ್ ರಜೆಗಳೂ ಇರುವುದರಿಂದ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚುತ್ತಾ ಸಾಗಲಿದೆ..
ಆದ್ರೆ ದೀಪಾವಳಿ ಸಮಯದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಡಾಲಿ ಧನಂಜಯ ನಟನೆಯ ಹೆಡ್ ಬುಷ್ ಸಿನಿಮಾ ಕೂಡ ರಿಲೀಸ್ ಆಗುತ್ತೆ.. ಈ ಸಿನಿಮಾ ಕೂಡ ಅಬ್ಬರಿಸೋದ್ರಲ್ಲಿ ಡೌಟೇ ಇಲ್ಲ.. ಹೆಡ್ ಬುಷ್ ಲೆಕ್ಕಾಚಾರ ಬೇರೆ..
ಆದ್ರೆ ಅಸಲಿಗೆ ಕಾಂತಾರ VS ಬಾಲಿವುಡ್ ಅಂತ ತಗೊಳ್ಳೋದಾದ್ರೆ , ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ರಾಮ್ ಸೇತು , ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾಗಳು ರಿಲೀಸ್ ಆಗಲಿವೆ.. ಆದ್ರೆ ಈ ಬಾರಿಯೂ ಸೌತ್ ಸಿನಿಮಾವೇ ಗೆಲ್ಲೋದು , ದೀಪಾವಳಿಯ ಸಿಹಿ ನಮಗೇನೇ ಅಂತಿದ್ದಾರೆ ಸೌತ್ ಇಂಡಸ್ಟ್ರಿಯ ಅಭಿಮಾನಿಗಳು..