Kantara : ವಿರೋಧಗಳು ವ್ಯಕ್ತವಾದ್ರೂ ಸುಮ್ಮನಾಗದ ಚೇತನ್ – ‘ಆಮದು ಮಾಡಿಕೊಂಡ ಧರ್ಮಗಳು’ ಎಂದರು
ಕಾಂತಾರ ಸಿನಿಮಾದಲ್ಲಿ ದೈವಾರಾಧನೆ ಕುರಿತಾಗಿ ಮಾತನಾಡುತ್ತಾ ಇದು ಹಿಂದೂ ಸಂಪ್ರದಾಯಕ್ಕೆ ಸೇರಿದ್ದಲ್ಲ ದ ಚೇತನ್ ವಿರುದ್ಧ ಸಾಕಷ್ಟು ಟೀಕಾಪ್ರಹಾರ ನಡೆಯುತ್ತಿದ್ದು , ಹಲವರು ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆ.. ಈ ಸಂಬಂಧ ಚೇತನ್ ವಿರುದ್ಧ ದೂರು ಕೂಡ ದಾಖಲಾಗಿದೆಯಾದ್ರೆ ಚೇತನ್ ಮಾತ್ರ ಸುಮ್ಮನಾಗುವ ಲಕ್ಷಣ ಕಾಣುತ್ತಿಲ್ಲ,..
ಇದೀಗ ಚೇತನ್ ಧರ್ಮದ ಬಗ್ಗೆ ಟ್ವೀಟ್ ಮಾಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.. ‘ಆಮದು ಮಾಡಿಕೊಂಡ ಧರ್ಮಗಳು’ ಎಂದು ಚೇತನ್ ಟ್ವೀಟ್ ಮಾಡಿದೆ ವಿವಾದ ಬೆಂಕಿಗೆ ತುಪ್ಪ ಸುರಿದಿದ್ದಾರೆ..
ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ. ನಮ್ಮ ಆದಿವಾಸಿ, ಅಲೆಮಾರಿ ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ.
ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಇಂತಹ ಆಮದು ಮಾಡಿಕೊಂಡ ಧರ್ಮಗಳು, ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ. ಎಲ್ಲಾ ಅಸಮಾನತೆಗಳನ್ನ ನಾವು ವಿರೋಧಿಸಬೇಕು ಎಂದಿದ್ದಾರೆ.