Kantara : ಕಾಂತಾರ ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದ ಕಂಗನಾ..!!!
ಬಾಲಿವುಡ್ ಸಿನಿಮಾಗಳ ವಿರುದ್ಧವೇ ತಪ್ಪುಗಳನ್ನ ತೋರಿಸಿ ವಿರೋಧಿಸುವ ಬಾಲಿವುಡ್ ನ ‘ಕ್ವೀನ್’ ಕಂಗನಾ ರಣೌತ್ ಸೌತ್ ಸಿನಿಮಾಗಳನ್ನ ಹೊಗಳುತ್ತಾ , ಸೌತ್ ಸಿನಿಮಾಗಳು ಸಂಸ್ಕೃತಿ ಉಳಿಸಿತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಅಂದ್ಹಾಗೆ ದೇಆಶದ್ಯಂತ ಸಂಚಲನ ಸೃಷ್ಟಿ ಮಾಡಿರುವ ನಮ್ಮ ಕರುನಾಡಿನ ಸೊಗಡಿನ ಕಾಂತಾರ ಸಿನಿಮಾವನ್ನ ಎಲ್ಲಾ ಭಾಷೆಯ ತಾರೆಯರು ಕೊಂಡಾಡುತ್ತಿದ್ದಾರೆ.. ರಿಷಬ್ ನಟನೆಗೆ ಸ್ಟಾರ್ ನಟರು ಫಿದಾ ಆಗಿದ್ದಾರೆ.. ಈ ನಡುವೆ ಕಂಗನಾ ರಣಾವತ್ ತಾವು ಕಾಂತಾರ ಸಿನಿಮಾ ನೋಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ..
ಕಿಚ್ಚ ಸುದೀಪ್ , ಜಗ್ಗೇಶ್ , ಪ್ರಭಾಸ್ , ಅನುಷ್ಕಾ ಶೆಟ್ಟಿ , ಅನಿಲ್ ಕುಂಬ್ಳೆ, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್, ಧನುಷ್, ರಾಣಾ ದಗ್ಗುಬಾಟಿ , ಸಿಂಬು ಸೇರಿದಂತೆ ದೊಡ್ಡ ಸ್ಟಾರ್ ನಟರೇ ಸಿನಿಮಾವನ್ನ ಹೊಗಳಿದ್ದಾರೆ.. ನಟಿ ಕಂಗನಾ ರನೌತ್ ಅವರು ಕಾಂತಾರ ಬಗ್ಗೆ ಇನ್ಸ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದು “#ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳುವುದು ತುಂಬಾ ಕುತೂಹಲ ಮೂಡಿಸಿದ್ದು , ಸಿನಿಮಾ ನೋಡಲು ಬಹಳ ಕಾತರಳಾಗಿದ್ದೀನಿ ಎಂದಿದ್ದಾರೆ..