Kantara : ಕಾಂತಾರ ವೀಕ್ಷಿಸಲಿದ್ದಾರಂತೆ ಪ್ರಧಾನಿ ನರೇಂದ್ರ ಮೋದಿ..!! ಯಾವಾಗ..??
ಒಂದೆಡೆ ದೇಶಾದ್ಯಂತ ಕಾಂತಾರ ಅಲೆ ಎದ್ದಿದೆ.. ಯಾರು ನೋಡಿದ್ರೂ ಕಾಂತಾರದ ಗುಣಗಾನ ಮಾಡ್ತಿದ್ದಾರೆ.. ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ರ್ಭಟವೂ ಮುಂದುವರೆದಿದೆ.. ಸಿನಿಮಾ 150 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ..
ಕನ್ನಡ , ಹಿಂದಿ , ತಮಿಳು, ತೆಲುಗು , ಮಲಯಾಳಂನಲ್ಲಿ ಸಿನಿಮಾದ ರ್ಭಟ ಮುಂದುವರೆದಿದೆ.
ಈ ನಡುವೆ ಸಿನಿಮಾವನ್ನ ಸ್ಟಾರ್ ನಟರೂ ಕೂಡ ನೋಡಿ ಮೆಚ್ಚಿಕೊಳ್ತಿದ್ದಾರೆ.. ಪರಭಾಷಿಇಗರು ರಿಷಬ್ ಗೆ ಫ್ಯಾನ್ ಆಗಿದ್ದಾರೆ..
ಇದೀಗ ಕಾಂತರದ ಮತ್ತೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡ್ತಿದೆ..
ಅದೇನೆಂದ್ರೆ ಪ್ರಧಾನಿ ಮೋದಿ ಅವರು ಈ ಸಿನಿಮಾವನ್ನ ವೀಕ್ಷಿಸಲಿದ್ದಾರೆ ಎಂಬುದು..
ಹೌದು..!
ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿನಿಮಾ ನೋಡಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ.. ನವೆಂಬರ್ 14 ರಂದು ಸಿನಿಮಾ ವೀಕ್ಷಿಸಲಿದ್ದಾರೆ ಎನ್ನಲಾಗ್ತಿದೆ.. ಆದ್ರೆ ಸಿನಿಮಾತಂಡದಿಂದ ಅಥವ ಪ್ರಧಾನಿ ಕಚೇರಿಯಿಂದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ..
ಅಂದ್ಹಾಗೆ ಕಳೆದ ಬಾರಿ ಕರುನಾಡಿಗೆ ಭೇಟಿನೀಡಿದ್ದ ನಮೋ ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದರು.. ಅಂತೆಯೇ ನವೆಂಬರ್ ನಲ್ಲಿ ರಾಜ್ಯಕ್ಕೆ ಬರಲಿದ್ದು ಈ ವೇಳೆ ಸಿನಿಮಾ ವೀಕ್ಷಿಸಲಿದ್ದಾರೆ ಎನ್ನಲಾಗ್ತಿದೆ…