Kantara : ಯಾರವರು..?? ಚನ್ನಾಗಿದ್ದಾರಾ..?? ಚೇತನ್ ಹೇಳಿಕೆಗೆ ರಿಷಬ್ ವ್ಯಂಗ್ಯಾತ್ಮಕ ಟಾಂಗ್..!!!
ಒಂದೆಡೆ ಕಾಂತಾರ ಸಿನಿಮಾವನ್ನ ದೇಶಾದ್ಯಂತ ಜನ ಪ್ಪಿಕೊಂಡಿದ್ದು , ರಿಷಬ್ ಶೆಟ್ಟಿ ನಟನೆಗೆ ಫಿದಾ ಆಗಿದ್ದಾರೆ.. ಸಿನಿಮಾವನ್ನ ಪರಭಾಷಿಗರೂ ಕೊಂಡಾಡ್ತಿದ್ದಾರೆ.. ಆದ್ರೆ ಕೆಲವರು ಮೊಸರಲ್ಲಿ ಕಲ್ಲು ಹುಡುಕೋಕಂತಲೇ ಇರುತ್ತಾರೆ..
ಅಂತೆಯೇ ಕನ್ನಡದವರೇ ಆದ ಚೇತನ್ ಅಹಿಂಸಾ ಅವರು ಕನ್ನಡದ ಸಿನಿಮಾದ ಸಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಜಾಗದಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಾ ವಿರೋಧ ವ್ಯಕ್ತಪಡಿಸಿ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ..
ಬಹುತೇಕರು ಚೇತನ್ ಹೇಳಿಕೆ ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.. ಇದೀಗ ಖುದ್ದು ರಿಷಬ್ ಶೆಟ್ಟಿ ಅವರು ಈ ಬಗ್ಗೆ ಮಾತನಾಡುತ್ತಾ ತಮ್ಮದೇ ಅಂದಾಜ್ ನಲ್ಲಿ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ..
ದೈವಾರಾಧನೆ , ಭೂತಕೋಲ ನಮ್ಮ ಹಿಂದೂ ಸಂಸ್ಕೃತಿ ಅಲ್ಲ ದಿರುವ ಚೇತನ್ ಅವರ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.. ಇದೀಗ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ವೇಳೆ ರಿಷಬ್ ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..
ನೀವು ಭೂತಾರಾಧನೆಯನ್ನು ತಿರುಚಿ ಪ್ರಸ್ತುತ ಪಡಿಸಿದ್ದೀರ ಎಂದು ಕರ್ನಾಟಕದ ನಟರೊಬ್ಬರು ಹೇಳಿದ್ದಾರೆ ಅದು ನಿಜಾನಾ ಎಂದು ಸಂದರ್ಶಕರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಿಷಬ್ ಅವರು ಯಾರು ಅವರು..?? ಅವರು ಚನ್ನಾಗಿದ್ದಾರಾ..?? ಅವರೇನ್ ಮಾಡ್ತಿದ್ದಾರೆ..?? ನನ್ನದು ನೋ ಕಾಮೆಂಟ್ಸ್ ಎಂದು ವ್ಯಂಗ್ಯಾತ್ಮಕವಾಗಿ ಉತ್ತರಿಸಿದ್ದಾರೆ..
ಅಷ್ಟೇ ಅಲ್ಲ ನಾನು ಇಂತಹ ವಿಷಯಗಳಿಗೆ ಉತ್ತರಿಸುವ ಅವಶ್ಯಕತೆಯಿಲ್ಲ.. ಆ ಸಂಸ್ಕೃತಿಯನ್ನ ಆರಾಧಿಸುವವರೇ ಅದನ್ನ ಪ್ಪಿಕೊಂಡಿದ್ದಾರೆ.. ನಾನು ಈ ಸಿನಿಮಾ ಮಾಡಬೇಕಾದರೆ ಎಲ್ಲದರ ಬಗ್ಗೆ ಜಾಗೃತಿ ವಹಿಸಿದ್ದೇನೆ.. ಆ ಸಂಸ್ಕೃತಿಯನ್ನ ಳಿಸಿ ಬೆಳೆಸುತ್ತಿರುವವರೇ ನನ್ನ ಜೊತೆಗಿದ್ದರು.. ನಾನೂ ಕೂಡ ಅಲ್ಲಿಯವನೇ ಸಣ್ಣ ವಯಸ್ಸಿನಿಂದಲೂ ಅದನ್ನೇ ನೋಡುತ್ತಾ ಬೆಳೆದವನು ಎಂದಿದ್ದಾರೆ..
ಮುಂದುವರೆದು ಸಿನಿಮಾ ಮಾಡಿದ್ದೇನೆ, ಇನ್ಮುಂದೆ ಅದು ಜನರ ಸಿನಿಮಾವಷ್ಟೇ.. ಅವರು ಮಾತನಾಡಲಿ.. ಬೇರೆಯವರಿಗೆ ನಾನು ಉತ್ತರಿಸುವ ಅಗತ್ಯವಿಲ್ಲ.. ಕೆಲಸ ಮಾಡಬೇಕಿತ್ತು, ಮಾಡಿದ್ದೇನೆ. ಈ ಸಿನಿಮಾಗಾಗಿ ರಕ್ತ ಸುರಿಸಿದ್ದೇನೆ. ಜನಕ್ಕೆ ಅದು ಇಷ್ಟವಾಗಿದ್ದರೆ ಸ್ವೀಕರಿಸುತ್ತಾರೆ, ಎಲ್ಲಿಗೆ ತೆಗೆದುಕೊಂಡು ಹೋಗಬೇಕೊ ತೆಗೆದುಕೊಂಡು ಹೋಗುತ್ತಾರೆ. ಅಂತಿಮವಾಗಿ ಮಾತನಾಡಬೇಕಿರುವುದು ಸಿನಿಮಾ ವೀಕ್ಷಿಸಿದ ಜನ ಎಂದಿದ್ದಾರೆ..
ಭೂತಕೋಲಕ್ಕೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ.. ಸಂಸ್ಕೃತಿಯ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗೆ ಇಲ್ಲ. ಪ್ರಶ್ನೆ ಕೇಳುವವರಿಗೆ ಇದೆಯೋ ಇಲ್ಲವೊ ಗೊತ್ತಿಲ್ಲ. ಅರ್ಹತೆ ಯಾರಿಗೆ ಇದೆಯೆಂದರೆ, ಆ ಸಂಸ್ಕೃತಿಯನ್ನು ಪಾಲಿಸುತ್ತಿರುವವರಿಗೆ, ದೈವಾರಾಧನೆ ಮಾಡುತ್ತಿರುವವರಿಗೆ ಇದೆ. ಅವರು ತಲೆಮಾರುಗಳಿಂದ ಆ ಸಂಸ್ಕೃತಿಯನ್ನು ಆಚರಿಸಿಕೊಂಡು, ಉಳಿಸಿಕೊಂಡು ಬರುತ್ತಿದ್ದಾರೆ. ಇವತ್ತು ಸುಮ್ಮನೆ ಕೂತು ಮಾತನಾಡಿಬಿಡುವುದಲ್ಲ ಎಂದು ನಯವಾಗಿಯೇ ಸಖತ್ ತಿರುಗೇಟು ನೀಡಿದ್ದಾರೆ..