Kantara – ಕಾಂತಾರ ಸಿನಿಮಾ ಸದ್ಯಕ್ಕೆ ಒಂದು ಸಿನಿಮಾವಾಗಿ ಉಳಿದಿಲ್ಲ,, ಅದೊಂದು ಎಮೋಷನ್ ಆಗಿ ಜನರ ಭಾವನೆಗಳ ಜೊತೆಗೆ ಬೆರೆತುಹೋಗಿದೆ.. ಭಾರತದಾದ್ಯಂತ ಐದೂ ಭಾಷೆಗಳಲ್ಲೂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿರುವ ಕಾಂತಾರದಲ್ಲಿ ಭೂತಾರಾಧನೆ , ದೈವಾರಾಧನೆಯನ್ನ ತೋರಿಸಲಾಗಿದೆ..
ಇದೀಗ ಕಾಂತಾರ ಸಿನಿಮಾದ ಪರಿಣಾಮವಾಗಿ ಭೂತಾರಾಧನೆ ಮಾಡುವ ಹಿರಿಯ ದೈವ ನರ್ತಕರಿಗೆ ಸರ್ಕಾರದಿಂದ ಮಾಸಾಶನ ಘೋಷಣೆ ಮಾಡಲಾಗಿದೆ..
ಹೌದು..!
ದೈವ ನರ್ತನೆ ಮಾಡುವ 60 ವರ್ಷ ತುಂಬಿ ದೈವನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂಗಳ ಮಾಸಾಶನ ( Pension) ನೀಡುವ ನಿರ್ಧಾರ ಮಾಡಿದೆ..
ಈ ಬಗ್ಗೆ ಸುದ್ದಿಗಾರರ ಜೊತೆಗೆ ಬೆಂಗಳೂರಿನಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಅವರು ದೈವ ನರ್ತನೆ , ಭೂತಾರಾಧನೆ ಮಾಡುವವರ ದೊಡ್ಡ ಸಂಖ್ಯೆಯೇ ಇದೆ. ಪ್ರತಿ ವರ್ಷ ದೈವಾರಾಧನೆ ಮಾಡಿಕೊಳ್ಳುತ್ತಲೇ ತಮ್ಮ ಕಸುಬು ನಡೆಸುತ್ತಿರುವ ಜನ ಇದ್ದಾರೆ. ಹಾಗಾಗಿ ದೈವ ನರ್ತನ ಮಾಡುತ್ತಿರುವ 60 ವರ್ಷ ಮೀರಿದವರಿಗೆ ಮಾಸಾಶನ ನೀಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಸಂಬಂಧಪಟ್ಟ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲಾಗುತ್ತದೆ ಎಂದು ತಿಳಿಸಿದರು.