ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನ ಬರೆಯುತ್ತಿದೆ. ಚಿತ್ರದ ಡಬ್ಬಿಂಗ್ ಆವೃತ್ತಿಗಳು ಕೂಡ ಉತ್ತಮ ಪ್ರದರ್ಶನ ಕಾಣುತ್ತಿವೆ. ಜಾಗತಿಕವಾಗಿ ಉತ್ತಮ ವ್ಯಾಪಾರ ಮಾಡುತ್ತಿರುವ ಕಾಂತಾರ ಇದೀಗ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರವಾಗಿದೆ.
ಕಾಂತಾರ ಈಗ ಕೆಜಿಎಫ್ ಭಾಗ 1 ಮತ್ತು ಕೆಜಿಎಫ್ ಭಾಗ 2 ನಂತರದ ಸ್ಥಾನದಲ್ಲಿ ನಿಂತಿದೆ. ಕಾಂತಾರ ಬಿಡುಗಡೆಯಾದ ಕೇವಲ 20 ದಿನಗಳಲ್ಲಿ ವಿಶ್ವದಾದ್ಯಂತ 171.41 ಕೋಟಿ ಗಳಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ವಿಕ್ರಾಂತ್ ರೋಣಾ, ಜೇಮ್ಸ್ ಮತ್ತು 777 ಚಾರ್ಲಿಯಂತಹ ಚಲನಚಿತ್ರಗಳನ್ನ ಹಿಂದಿಕ್ಕಿರುವ ಕಾಂತಾರ ಮುಂದೆ ಕೆಜಿಎಫ್ ಭಾಗ 1 ಮತ್ತು ಕೆಜಿಎಫ್ ಭಾಗ 2 ಮಾತ್ರ ಇವೆ. ಇದೇ ರೀತಿ ಗಳಿಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಜಿಎಫ್ ಚಾಪ್ಟರ್ 1ರ ಲೈಫ್ ಟೈಮ್ ಕಲೆಕ್ಷನ್ ನ ದಾಖಲೆಗಳನ್ನೂ ಮುರಿಯುವ ಸಾಧ್ಯತೆ ಇದೆ. ಕೆಜಿಎಫ್ ಚಾಪ್ಟರ್ 1 ಲೈಫ್ ಟೈಮ್ ಗಳಿಕೆ 240 ಕೋಟಿ.
ಕನ್ನಡಲ್ಲಿ ಭರ್ಜರಿ ಪ್ರದರ್ಶನಗೊಂಡ ನಂತರ ಹೊಂಬಾಳೆ ಫಿಲಂಸ್ ಬೇರೆ ಬಾಷೆಗಳಲ್ಲೂ ಚಿತ್ರವನ್ನ ಬಿಡುಗಡೆ ಮಾಡಿತ್ತು. ಕೇವಲ ಹಿಂದಿ ಭಾಷೆಯಲ್ಲೇ 4 ದಿನದಲ್ಲಿ 10 ಕೋಟಿ ಗಳಿಸಿರುವ ಕಾಂತಾರ ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗಿದೆ.