BigBoss Kannada 9 : ಬಿಗ್ ಬಾಸ್ ಸೀಸನ್ 9 ನಾಲ್ಕನೇ ವಾರಕ್ಕೆ ಬಂದಿದೆ.. ಒಟಿಟಿಯಂತೆಯೇ ಈ ಸೀಸನ್ ನಲ್ಲೂ ಆರ್ಯವರ್ಧನ್ ಗುರೂಜಿ ಸಖತ್ ಹೈಲೇಟ್ ಆಗ್ತಿದ್ದಾರೆ.. ದಿನೇ ದಿನೇ ಬಿಗ್ ಬಾಸ್ ವಿಚಿತ್ರ ವಿಚಿತ್ರ ಟಾಸ್ಕ್ ಗಳನ್ನ ಕೊಟ್ಟು ಸ್ಪರ್ಧಿಗಳನ್ನ ಸತಾಯಿಸುತ್ತಿದ್ದು , ನಾಲ್ಕನೇ ವಾರದ ನಾಲ್ಕನೇ ದಿನ ಮನೆಯ ಸದಸ್ಯರಿಗೆ ಸಾಲು ಸಾಲು ಟಾಸ್ಕ್ ಗಳನ್ನು ನೀಡಲಾಗಿತ್ತು..
ಮೊದಲನೇ ಟಾಸ್ಕ್ ನಲ್ಲಿ ರಾತ್ರಿ ಪೂರ ಲೈಟ್ ಸ್ವಿಚ್ಚನ್ನ ಒತ್ತಿ ಹಿಡಿದುಕೊಂಡೇ ಇರಬೇಕಿತ್ತು.. ಸ್ವಿಚ್ ಬಿಟ್ಟರೆ ಗುರೂಜಿ ಟಾಸ್ಕ್ ನಿಂದ ಹೊರಹೋಗಬೇಕಾಗಿತ್ತು.. ಕೆಲವರು ಈ ಟಾಸ್ಕ್ ನಿಂದಾಗಿ ರಾತ್ರಿಯಿಡೀ ಒದ್ದಾಡಿದರು..
ಕೆಲವರು ಸ್ವಲ್ಪ ಸಮಯಕ್ಕೇ ಕೈಬಿಟ್ಟು ನಿದ್ದೆ ಮಾಡಿಬಿಟ್ಟರು.. ಆದ್ರೆ ಗುರೂಜಿ ಒದ್ದಾಟದ ನಡುವೆಯೂ ಸ್ವಿಚ್ ಬಿಟ್ಟಿರಲಿಲ್ಲ.. ಆದ್ರೆ ನಿಂತಲ್ಲೇ ಮಾತ್ರ ವಿಸರ್ಜನೆ ಮಾಡಿದ್ದು , ಅವರ ಅವಾಂತರಕ್ಕೆ ಮನೆ ಮಂದಿ ನಕ್ಕಿದ್ದಾರೆ..
ಟಾಸ್ಕ್ ಗೆಲ್ಲಲೇಬೇಕೆಂದು ಹಠದಿಂದ ಸ್ವಿಚ್ ಹಿಡಿದು ನಿಂತಿದ್ದ ಗುರೂಜಿಯ ಒದ್ದಾಟವನ್ನ ಗಮನಿಸಿದ ಕಾವ್ಯಶ್ರೀ ಮೂತ್ರ ಮಾಡುವುದಿದ್ದರೆ ಅಲ್ಲೇ ಮಾಡಿಕೊಳ್ಳಿ ಎಂದು ತಮಾಷೆ ಮಾಡಿದರು. ಅದಕ್ಕೆ ಉತ್ತರಿಸಿದ ಆರ್ಯವರ್ಧನ್, ಅದಾಗಲೇ ಆಗಿದೆ ಎಂದು ಹೇಳಿದ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ..
ನಂತರ ಬಿಗ್ ಬಾಸ್ ಗೆ ಮನವಿ ಮಾಡಿಕೊಂಡ ಗುರೂಜಿ ಬಿಗ್ ಬಾಸ್ ಜನ ಹೊರಗೆ ನೋಡ್ತಿದ್ದಾರೆ.. ಮೊದಲನೇಯದ್ದು ಆಗಿದೆ.. ಎರಡನೇಯದ್ದು ಆಗಬಾರದು.. ದಯವಿಟ್ಟು ಬೇಗ ಟಾಸ್ಕ್ ಮುಗಿಸಿ ಎಂದು ಮನವಿ ಮಾಡಿಕೊಂಡರು..