BigBoss Kannada 9 : ಬಿಗ್ ಬಾಸ್ ಸೀಸನ್ 9 ನಾಲ್ಕನೇ ವಾರಕ್ಕೆ ಬಂದಿದೆ..
ದೀಪಿಕಾ ದಾಸ್ ನಾಲ್ಕನೇ ವಾರದ ಮನೆಯ ಕ್ಯಾಪ್ಟನ್ ಆಗಿದ್ದು , ಈ ಸೀಸನ್ ನ ಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ..
ಆದ್ರೆ
ಈ ಸೀಸನ್ ನ ಕೆಟ್ಟ ಕ್ಯಾಪ್ಟನ್ ದೀಪಿಕಾ ದಾಸ್ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು , ದೀಪಿಕಾ ದಾಸ ಫೇವರೇಟಿಸಂ ಮಾಡ್ತಿದ್ದಾರೆ ಎಂದು ಆರೋಗಳನ್ನ ಮಾಡುತ್ತಿದ್ದಾರೆ..
ಟಾಸ್ಕ್ ಸಮಯದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಬಿಗ್ ಬಾಸ್ ಕನ್ನಡ 9 ವೀಕ್ಷಕರು ದೀಪಿಕಾ ದಾಸ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ದೀಪಿಕಾ ಫನ್ ಟಾಸ್ಕ್ ಗಳನ್ನು ಸೀರಿಯಸ್ ಟಾಸ್ಕ್ ಗಳನ್ನಾಗಿ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಬಿಬಿಕೆ9 ವೀಕ್ಷಕರು.
ದೀಪಿಕಾಗೆ ಯಾವುದೇ ಕೇಳುವ ಕೌಶಲ್ಯವಿಲ್ಲ ಎಂದು ಹೇಳುತ್ತಿದ್ದಾರೆ..
ದೀಪಿಕಾ ದಾಸ್ ಟಾಸ್ಕ್ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ ಮತ್ತು ಸ್ಪರ್ಧಿಗಳನ್ನೂ ಗೊಂದಲಗೊಳಿಸುತ್ತಿದ್ದಾರೆ ಎಂದು ಪ್ರೇಕ್ಷಕರು ಭಾವಿಸುತ್ತಿದ್ದಾರೆ.
ವಿನಾಕಾರಣ ದೀಪಿಕಾ ದಾಸ್ ಚೀರಾಡುತ್ತಾ ಡ್ರಾಮಾ ಮಾಡ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.