Head Bush : ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷೆಯ ಹೆಡ್ ಬುಷ್ ಸಿನಿಮಾ ರಿಲೀಸ್ ಆಗಿ ಒಳ್ಲೆಯ ರೆಸ್ಪಾನ್ಸ್ ಪಡೆಯುತ್ತಿದೆ.. ಸಿನಿಮಾದಲ್ಲಿ ಲೂಸ್ ಮಾದ ಯೋಗಿ , ವಸಿಷ್ಠ ಸಿಂಹ ಸೇರಿದಂತೆ ಸ್ಟಾರ್ ನಟರೇ ಬಣ್ಣ ಹಚ್ಚಿದ್ದಾರೆ..
ನಟ ರಾಕ್ಷಸ ಡಾಲಿ ಧನಂಜಯ್.. ಪಾತಕ ಜಗತ್ತಿನ ಕಥೆಯಾಧಾರಿತ ಹೆಡ್ ಬುಷ್ ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಡಾನ್ MP ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಬರೆದಿದ್ದು, ಹೊಸ ನಿರ್ದೇಶಕ ಶೂನ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಪಿಕ್ಷರ್ಸ್ ಮತ್ತು ಸೋಮಣ್ಣ ಟಾಕಿಸ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತಿ ಚಿತ್ರ ಹೆಡ್ ಬುಷ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ..
ಡಾಲಿ ನಟನೆ ನೋಡಿ ಅವರನ್ನ ನಟ ರಾಕ್ಷಸನೇ ಅಂತಿದ್ದಾರೆ ನೆಟಿಜನ್ಸ್… ಡಾಲಿ ಜಯರಾಮನ ಪಾತ್ರಕ್ಕೆ ಪರ್ಫೆಕ್ಟ್ ಎನ್ನುತ್ತಿದ್ದಾರೆ.. ಡಾಲಿ ಹೀರೋ ಹಾಗೂ ವಿಲ್ಲನ್ ಎರೆಡೂ ಇಮೇಜ್ ನಲ್ಲೂ ಮಿಂಚು , ಆ ಪಾತ್ರಕ್ಕೆ ನ್ಯಾಯ ದಗಿಸುವ ಪ್ರತಿಭಾನ್ವಿತ ನಟ..
ಈ ಸಿನಿಮಾದಲ್ಲಿ ಒಂದ್ ರೀತಿ ಡಾಲಿ ವಿಲ್ಲನ್ ಹೀರೋ ಎಂದು ವರ್ಣಿಸಬಹುದು.. ಹಿನ್ನೆಲೆ ಸಂಗೀತಕ್ಕೂ ಇಲ್ಲಿ ಫುಲ್ ಮಾರ್ಕ್ಸ್ ಕೊಡಲೇ ಬೇಕು..ಕೊತ್ವಾಲನಾಗಿ ವಶಿಷ್ಠ ಸಿಂಹ ಕೂಡ ಅಬ್ಬರಿಸಿದ್ದಾರೆ..
ಇತ್ತ ಸಿನಿಮಾ ವೀಕ್ಷಿಸಿದ ಜಯರಾಜ್ ಅವರ ಸಹೋದರಿ ಎಂ.ಪಿ ಹೇಮಾವತಿ ಡಾಲಿ ನಟನೆಯನ್ನ ಕೊಂಡಾಡಿದ್ದಾರೆ…
ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋ ಇತ್ತು.. ಈ ವೇಳೆ ಸಿನಿಮಾ ವೀಕ್ಷಿಸಿದ ನಾನು ಸಿನಿಮಾಗಳನ್ನು ನೋಡಿ 25 ವರ್ಷ ಆಗಿ ಹೋಗಿತ್ತು. 25 ವರ್ಷಗಳಿಂದ ನಾನು ಯಾವುದೇ ಸಿನಿಮಾ ನೋಡಿರಲಿಲ್ಲ.. ಹೆಡ್ ಬುಷ್ ಸಿನಿಮಾ ನೋಡಿದೆ.. ತುಂಬಾ ಖುಷಿ ಆಯ್ತು. ನೈಜ ಕಥೆಗೆ ಸಿನಿಮಾ ಬಹಳ ಹತ್ತಿರವಾಗಿದೆ.
ತೆರೆಮೇಲೆ ನಮ್ಮ ಅಣ್ಣನನ್ನೇ ನೋಡಿದಂತಾಯ್ತು. ದೇವ್ರಾಣೆ ಧನಂಜಯನ ನೋಡಿ ನಮ್ಮಣ್ಣನನ್ನೇ ನೋಡಿದಂತೆ ಭಾಸವಾಯಿತು. ಧನಂಜಯ ಮುಖಚಹೆರೆ , ಲುಕ್ ಎಲ್ಲಾ ನೋಡಿದ್ರೆ, ನಮ್ಮಣ್ಣನನ್ನೇ ನೋಡುತ್ತಿದ್ದೇನೆ ಎನಿಸಿತು ಎಂದಿದ್ದಾರೆ..
ಅಲ್ಲದೇ ನಾನೂ ಸಹ ಹೆಡ್ ಬುಷ್ ಆಡ್ತಿದ್ದೆ.. ಆದ್ರೆ ನಾನು ಹೆಡ್ ಬುಷ್ ಆಡಿದರೆ ಅಗ್ನಿ ಶ್ರೀಧರಣ್ಣ ಬಯ್ಯುತ್ತಿದ್ದರು.. ತಿಗಳರ ಪೇಟೆಯಲ್ಲಿ ನನ್ನ ಜೊತೆ ಹೆಡ್ ಬುಷ್ ಆಡುತ್ತಿದ್ದವರು ಈಗಲೂ ಇದ್ದಾರೆ. ನಮ್ಮ ಅಣ್ಣನಿಗೆ ಗೊತ್ತಾಗದಂತೆ ಆಡುತ್ತಿದ್ದೆ. ಜಯರಾಜ್ ಬಂದು ಬಿಡ್ತಾನೆ ನೋಡಿಕೊಳ್ರೋ ಎಂದು ಹುಡುಗರನ್ನು ನಿಲ್ಲಿಸಿ ಆಡುತ್ತಿದ್ದೆ ಎನ್ನುತ್ತಾ ಹಳೆ ದಿನಗಳ ನೆನಪು ಮಾಡಿಕೊಂಡಿದ್ದಾರೆ..