Kantara | ದೇಶಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರವ ಸಿನಿಮಾವನ್ನ ಕನ್ನಡಿಗರಷ್ಟೇ ಅಲ್ದೇ ಪರ ಭಾಷಾ ಪ್ರೇಕ್ಷಕರು ಸ್ಟಾರ್ ನಟರು ಕೊಂಡಾಡುತ್ತಿದ್ದಾರೆ..
ಈ ನಡುವೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಎಂಬಂತೆ ಕನ್ನಡದವರೇ ಆದ ನಟ ಚೇತನ್ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.. ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದಿದ್ದ ನಂತರ ಅವರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದರು..
ಆದ್ರೆ ಚೇತನ್ ಇಷ್ಟಕ್ಕೆ ಸುಮ್ಮನಾಗದೇ ಇತ್ತೀಚಗೆ ‘ಆಮದು ಮಾಡಿಕೊಂಡ ಧರ್ಮಗಳು” ಎಂಬ ಪೋಸ್ಟ್ ಅನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದರು..
ಇದೀಗ ಹಿಂದೂ ಸಂಘಟನೆಗಳ ಮುಖಂಡರು ಚೇತನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಭೂತಾರಾಧನೆ ಹಿಂದೂಗಳದ್ದಲ್ಲ ಎಂದು ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಚೇತನ್ ಅಹಿಂಸಾರನ್ನ ತಕ್ಷಣ ಬಂಧಿಸಬೇಕು ಎಂದು ಧಾರವಾಡದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ನಟ ಚೇತನ್ ವಿರುದ್ಧ ದೂರು ದಾಖಲಿಸಿದ್ದಾರೆ.