ಮೊಸರಲ್ಲಿ ಕಲ್ಲು ಹುಡುಕುವ ಕೆಲಸವೆಂಬಂತೆ ಎಲ್ಲಾ ಭಾಷೆಗಳಲ್ಲೂ ಸೂಪರ್ ಸಕ್ಸಸ್ ಕಾಣುತ್ತಾ , ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ರಿಷಬ್ ಶೆಟ್ಟಿ ನಟನೆಯ ನಿರ್ದೇಶನದ ಕಾಂತಾರ ಸಿನಿಮಾ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿರುವ ಹೊತ್ತಲ್ಲಿ , ನಟ ಚೇತನ್ ಅಹಿಂಸಾ ಈ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ..
ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗವೆಂಬ ರಿಷಬ್ ಶೆಟ್ಟಿ ಹೇಳಿಕೆ ಒಪ್ಪಲು ಸಾಧ್ಯವಿಲ್ಲ.. ಅದು ಹಿಂದೂ ಸಂಸ್ಕೃತಿಗೆ ಸೇರಲ್ಲ ಎಂದಿದ್ದರು.. ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು , ಹಲವರು ಖಂಡಿಸಿದ್ದು , ದೂರು ಕೂಡ ದಾಖಲಿಸಲಾಗಿದೆ..
ಇದೀಗ ಚೇತನ್ ವಿರುದ್ಧ ಪಂಜುರ್ಲಿ ದೈವದ ಎದುರು ದೂರು ಸಲ್ಲಿಕೆಯಾಗಿದೆ ಎನ್ನಲಾಗ್ತಿದೆ..