Kantara : Kangana – ‘ಕಾಂತಾರ ಹ್ಯಾಂಗ್ ಓವರ್ ನಿಂದ ಹೊರ ಬರಲು ಒಂದು ವಾರ ಬೇಕು’..!!!
Kantara : ಕಾಂತಾರ ದೇಶಾದ್ಯಂತ ಭಾರೀ ಸೌಂಡ್ ಮಾಡ್ತಿದೆ.. ಸಿನಿಮಾಗೆ ಅದ್ರಲ್ಲೂ ಕ್ಲೈಮ್ಯಾಕ್ಸ್ ಗೆ ಜನರು ಫಿದಾ ಆಗಿದ್ದಾರೆ.. ರಿಷನ್ ನಟನೆಗೆ ರೋಮಾಂಚನಗೊಂಡಿದ್ದಾರೆ.. ಸಿನಿಮಾಗೆ , ರಿಷಬ್ ನಟನೆಗೆ , ಅವರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂದು ಚರ್ಚೆಗಳು ಆಗ್ತಿದೆ.. Kantara For Oscars ಟ್ರೆಂಡ್ ಆಗ್ತಿದೆ..
ಪ್ರಭಾಸ್ , ಕಿಚ್ಚ ಸುದೀಪ್ , ರಾಣಾ , ಸಿಂಬು , ಪೃಥ್ವಿ ಸುಕುಮಾರ್ , ಅನುಷ್ಕಾ ಶೆಟ್ಟಿ , ಜಗ್ಗೇಶ್ , ಸೇರಿದಂತೆ ಸ್ಟಾರ್ ನಟರು ಸಿನಿಮಾವನ್ನ ರಿಷಬ್ ನಟನೆಯನ್ನ ಬಾಯ್ತುಂಬ ಹೊಗಳಿದ್ದಾರೆ..
ಇದೀಗ ಬಾಲಿವುಡ್ ಕ್ವೀನ್ ಕಂಗನಾ ರಣೌತ್ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿದ್ದು , ವಿಡಿಯೋ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ..
ಇದು ಸಿನಿಮಾ ಅಂದ್ರೆ.. ಇದನ್ನ ಹೆಳ್ತಾರೆ ಸಿನಿಮಾ ಅಂತ.. ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುವುದಂತೂ ಅದ್ಭುತ. ಸಿನಿಮಾ ನೋಡಿಕೊಂಡು ಥಿಯೇಟರ್ ನಿಂದ ಹೊರ ಹೋಗುತ್ತಿದ್ದ ಸಾಕಷ್ಟು ಜನರನ್ನು ಮಾತಾಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ. ಅವರು ಹಿಂದೆಂದೂ ಇಂತಹದ್ದೊಂದು ಸಿನಿಮಾವನ್ನು ನೋಡಿಲ್ಲ ಎನ್ನುತ್ತಿದ್ದರು. ಇಂತಹದ್ದೊಂದು ಸಿನಿಮಾ ನೀಡಿದ್ದಕ್ಕೆ ಧನ್ಯವಾದಗಳು. ಇದು ನಿಜಕ್ಕೂ ಅದ್ಭುತ , ಇನ್ನೊಂದು ವಾರ ಇದರಿಂದ ಹೊರಬರುವುದಿಲ್ಲ ಅಂತ ಅನಿಸುತ್ತಿದೆ. ವ್ಹಾವ್ ಎಂದಿದ್ದಾರೆ..
ಸದ್ಯ ರಿಲೀಸ್ ಆದ 20 ದಿನಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಕಾಂತಾರ ಸಿನಿಮಾ ಹೊಸ ಹೊಸ ದಾಖಲೆ ಬರೆದಿದೆ.. KGF ಸರಣಿ ನಂತರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾವಾಗಿದೆ…
ಈಗಾಗಲೇ 170 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಾ ಮುನ್ನುಗುತ್ತಿದ್ದು , ಕನ್ನಡ ಮಾತ್ರವಲ್ಲ, ಹಿಂದಿ , ತಮಿಳು , ತೆಲುಗು , ಕನ್ನಡ , ಮಲಯಾಳಂ ಭಾಷೆಗಳಲ್ಲಿ ಸೂಪರ್ ಸಕ್ಸಸ್ ಕಾಣುತ್ತಿದೆ..