Kantara : 500 ಕೋಟಿ ಬಜೆಟ್ ನಿರ್ಮಾಕರಿಗೆ ಕಾಂತಾರ ಕಲೆಕ್ಷನ್ ನೋಡಿ ಹೃದಯಾಘಾಗುತ್ತದೆ – RGV
ಕಾಂತಾರ ಸಿನಿಮಾವನ್ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹೊಗಳುತ್ತಾ ಬಿಗ್ ಬಜೆಟ್ ಸಿನಿಮಾ ನಿರ್ದೇಶಕರನ್ನ ಟಾಂಟ್ ಮಾಡಿದ್ದಾರೆ..
ಸಿನಿಮಾ ನೋಡಿದ ರಾಮ್ ಗೋಪಾಲ್ ವರ್ಮಾ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಕೇವಲ ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಜನ ಬರ್ತಾರೆ ಎನ್ನುವುದನ್ನ ರಿಷಬ್ ಶೆಟ್ಟಿ ಅವರು ನಾಶಮಾಡಿದ್ದಾರೆ. ಮುಂದಿನ ದಶಕದ ವರೆಗೂ ಕಾಂತಾರ ಸಿನಿಮಾ ದೊಡ್ಡ ಪಾಠ..
ಚಿತ್ರರಂಗದಲ್ಲಿ ಈಗ ರಿಷಬ್ ಶೆಟ್ಟಿ ಶಿವ. ಕಾಂತಾರ ಕಲೆಕ್ಷನ್ ನಿಂದ ವಿಲನ್ ಗಳಾದ 300, 400, 500 ಕೋಟಿ ಸಿನಿಮಾ ಮೇಕರ್ಸ್‌ಗೆ ಹೃದಯಾಘಾತವಾಗಿದೆ ಎಂದು ಬರೆದುಕೊಂಡಿದ್ದು , ಅವರ ಟ್ವೀಟ್ ಭಾರೀ ವೈರಲ್ ಆಗುತ್ತಿದೆ..
ಇನ್ನೂ ಟ್ವೀಟ್ ಗಳಲ್ಲಿ ರಿಷಬ್ ಶೆಟ್ಟಿಗೆ ಧನ್ಯವಾದಗಳು. ಶಿವ ಹೇಗೆ ದೈವದ ಗೂಳಿಗೆ ಎಚ್ಚೆತ್ತುಕೊಳ್ಳುತ್ತಿದ್ದನೋ ಹಾಗೆ ಈಗ ಕಾಂತಾರ ಕಲೆಕ್ಷನ್‌ನಿಂದ ಎಲ್ಲಾ ದೊಡ್ಡ ದೊಡ್ಡ ಬಜೆಟ್ ಚಿತ್ರದ ತಯಾರಕರು ಹಠಾತ್ತನೆ ರಾತ್ರಿಯಲ್ಲಿ ಎಚ್ಚರಗೊಳ್ಳುತ್ತಿದ್ದಾರೆ ಎಂದಿದ್ದಾರೆ..
ಅಲ್ಲದೇ ರಿಷಬ್ ಶೆಟ್ಟಿ ಅವರ ಸಂದರ್ಶನ ಶೇರ್ ಮಾಡಿ, ಈ ಸಂದರ್ಶನ ನೋಡಲೇ ಬೇಕು. ಕಾಂತಾರ ಸಿನಿಮಾ ಮೂಡಿಬಂದಿದ್ದು ಸರಳತೆ ಮತ್ತು ಮುಗ್ದತೆಯಿಂದನೇ ಹೊರತು ಅತಿಯಾದ ಯೋಚನೆಯಿಂದ ಅಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಸಾಬೀತು ಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಇದೊಂದು ಸಿನಿಮಾವಲ್ಲ.. ಇದು ದಂತಕಥೆ ಎಂದಿದ್ದಾರೆ..