Kantara : ಕಾಂತಾರ ದೇಶಾದ್ಯಂತ ಭಾರೀ ಸೌಂಡ್ ಮಾಡ್ತಿದೆ.. ಸಿನಿಮಾಗೆ ಅದ್ರಲ್ಲೂ ಕ್ಲೈಮ್ಯಾಕ್ಸ್ ಗೆ ಜನರು ಫಿದಾ ಆಗಿದ್ದಾರೆ.. ರಿಷನ್ ನಟನೆಗೆ ರೋಮಾಂಚನಗೊಂಡಿದ್ದಾರೆ.. ಸಿನಿಮಾಗೆ , ರಿಷಬ್ ನಟನೆಗೆ , ಅವರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂದು ಚರ್ಚೆಗಳು ಆಗ್ತಿದೆ.. Kantara For Oscars ಟ್ರೆಂಡ್ ಆಗ್ತಿದೆ..
ಪ್ರಭಾಸ್ , ಕಿಚ್ಚ ಸುದೀಪ್ , ರಾಣಾ , ಸಿಂಬು , ಪೃಥ್ವಿ ಸುಕುಮಾರ್ , ಅನುಷ್ಕಾ ಶೆಟ್ಟಿ , ಜಗ್ಗೇಶ್ , ಸೇರಿದಂತೆ ಸ್ಟಾರ್ ನಟರು ಸಿನಿಮಾವನ್ನ ರಿಷಬ್ ನಟನೆಯನ್ನ ಬಾಯ್ತುಂಬ ಹೊಗಳಿದ್ದಾರೆ..
ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ..
ಅಂದ್ಹಾಗೆ ಉಪೇಂದ್ರ ಅವರು ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದು , ನನಗೂ ಮುಂದೆ ಇಂತಹ ಸಿನಿಮಾ ಮಾಡುವ ಆಸೆಯಿದೆ ಎಂದಿದ್ದಾರೆ..
ಅಲ್ಲದೇ ನಾನು ಸಿನಿಮಾ ಮಾಡಿದ್ದರೆ ಕಾಂತಾರ ಮಾಡಲು ಆಗುತ್ತಿರಲಿಲ್ಲ. ಕಾಂತಾರ ಸಿನಿಮಾವನ್ನು ತುಂಬಾ ಎಫೆಕ್ಟಿವ್ ಆಗಿ ಮಾಡಿದ್ದಾರೆ. ಸಂತೋಷ, ನನಗೂ ಮುಂದೆ ಇಂತಹ ಸಿನಿಮಾ ಮಾಡುವುದಕ್ಕೆ ಆಸೆಯಿದೆ. ರಿಷಬ್ ಹತ್ತಿರ ಮಾತಾಡುತ್ತೇನೆ ಎಂದು ಹೇಳಿದ್ದಾರೆ..
ಈ ಮೂಲಕ ರಿಷಬ್ ಶೆಟ್ಟಿ ಜೊತೆಗೆ ಮುಂದೆ ಸಿನಿಮಾ ಮಾಡುವ ಸುಳಿವು ಕೊಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.. ಒಂದೊಮ್ಮೆ ಈ ಜೋಡಿ ಸಿನಿಮಾಗೆ ಒಂದಾದ್ರೆ ಪಕ್ಕಾ ಆ ಸಿನಿಮಾ ಸಖತ್ ಹೈಪ್ ಕಲ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ..