ಕನ್ನಡದ ಸ್ಟಾರ್ ನಟ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ತನ್ನ ಕನಸಿನ ಓಟವನ್ನು ಮುಂದುವರೆಸುತ್ತಿದೆ. ಎಲ್ಲಾ ಆವೃತ್ತಿಗಳಲ್ಲೂ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ..
ಸಿನಿಮಾರಂಗದಲ್ಲಿ ಸದ್ಯಕ್ಕಂತೂ ಕಾಂತಾರದ್ದೇ ಸದ್ದು,, ಕಾಂತಾರದ್ದೇ ಮಾತನಾಗಿದೆ.. ಯಾರು ನೋಡಿದ್ರೂ ಕಾಂತಾರದ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ.. ಒಂದು ರೀತಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿರುವ ಡಿವೈನ್ ಬ್ಲಾಕ್ ಬಾಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ..
ಅಂದ್ಹಾಗೆ ದಿನಕ್ಕೊಂದು ದಾಖಲೆ ಬರೆಯುತ್ತಿರುವ ಸಿನಿಮಾ ಕನ್ನಡದ ಯಾವೊಂದು ಸಿನಿಮಾಗಳು ಈವರೆಗೂ ಮಾಡದ ದಾಖಲೆಯನ್ನ ತನ್ನ ಹೆಸರಿಗೆ ಬರೆದುಕೊಂಡಿದೆ..
ಅಂದ್ಹಾಗೆ ಕನ್ನಡದ ಒಂದು ಸಿನಿಮಾ ಇದೇ ಮೊದಲ ಬಾರಿಗೆ ವಿಯೇಟ್ನಂ ನಲ್ಲಿ ರಿಲೀಸ್ ಆಗುತ್ತಿದೆ.. ಅಷ್ಟೇ ಅಲ್ಲ ಇಂಡೋನೇಷ್ಯಾದಲ್ಲೂ ಕಾಂತಾರ ರಿಲೀಸ್ ಆಗಿದೆ.. ಈ ಮೂಲಕ ಮೊದಲ ಬಾರಿಗೆ ಈ ದೇಶಗಳಲ್ಲಿ ಕನ್ನಡ ಸಿನಿಮಾ ರಿಲೀಸ್ ಆಗಿದೆ..