Puneeth Parva : ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ಸೇವೇ ಘೋಷಿಸಿದ ಪ್ರಕಾಶ್ ರೈಗೆ ಸ್ಟಾರ್ ಗಳ ಬೆಂಬಲ
ನಿನ್ನೆ ಅರಮನೆ ಮೈದಾನದಲ್ಲಿ ನಡೆದ ವರ್ಣರಂಜಿತ ಪುನೀತ್ ಪರ್ವ ಕಾರ್ಯಕ್ರಮ ಹಲವು ಸಂಕಲ್ಪಗಳಿಗೆ ಕಾರಣವಾಯಿತು. ನಟ ಪ್ರಕಾಶ್ ರೈ ವೇದಿಕೆ ಮೇಲೆ ಮಾತನಾಡಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಜಿಲ್ಲೆಗೊಂದು ಅಂಬುಲೆನ್ಸ್ ಸೇವೆ ಶುರುಮಾಡುವ ಸಂಕಲ್ಪವನ್ನ ಹಂಚಿಕೊಂಡರು ಅಪ್ಪು ಎಕ್ಸ್ ಪ್ರೆಸ್ ಹೆಸರಿನಲ್ಲಿ ಈಗಾಗಲೇ ಮೈಸೂರು ಜಿಲ್ಲೆಗೆ ಅದನ್ನ ಕೊಟ್ಟಿರುವುದಾಗಿ ತಿಳಿಸಿದರು.
ಈ ವಿಚಾರ ಹೇಳುತ್ತಿದ್ದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ ಮತ್ತು ಶಿವರಾಜ್ ಕುಮಾರ್ ಕೂಡ ತಲಾ ಒಂದು ಆಂಬ್ಯುಲೆನ್ಸ್ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಪ್ರಕಾಶ್ ರೈ ಅವರು ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಯಶ್ ಕೂಡ ಅದಕ್ಕೆ ಕೈ ಜೋಡಿಸಿದರು. ರೈ ಕೆಲಸವನ್ನ ಮೆಚ್ಚಿಕೊಂಡು ಉಳಿದಿರುವ 25 ಜಿಲ್ಲೆಗಳಿಗೆ ತಾವೇ ಆಂಬ್ಯುಲೆನ್ಸ್ ಕೊಡುವುದಾಗಿ ಘೋಷಣೆ ಮಾಡಿದರು. ಯಶ್ ಮಾತಿಗೆ ಎದ್ದು ನಿಂತು ಚೆಪ್ಪಾಳೆ ತಟ್ಟಿ, ವೇದಿಕೆಗೆ ಬಂದು ಯಶ್ ನನ್ನು ತಬ್ಬಿಕೊಂಡರು ಪ್ರಕಾಶ್ ರೈ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.