Puneeth Parva : ಗಂಧದ ಗುಡಿ ಸಾಕ್ಷ್ಯ ಚಿತ್ರ ಪ್ರೀ ರಿಲೀಸ್ ಈವೆಂಟ್ ‘ಪುನೀತ ಪರ್ವ’ ನಿನ್ನೆ ( ಅಕ್ಬೋಬರ್ 21) ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು..
ಅನೇಕ ದಕ್ಷಿಣ ಭಾರತದ ನಟ ನಟಿಯರು , ರಾಜಕೀಯ ಗಣ್ಯರು , ಅಪ್ಪು ಅಭಿಮಾನಿಗಳು ದೊಡ್ಮನೆ ಕುಟುಂಬದ ಸದಸ್ಯರು , ಕನ್ನಡ ಸಿನಿಮಾರಂಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಪ್ಪುವನ್ನ ನೆನೆಪು ಮಾಡಿಕೊಂಡರು..
ಅನೇಕ ಸ್ಟಾರ್ ಗಳು ವೇದಿಕೆ ಮೇಲೆ ಅಪ್ಪು ನೆನಪು ಮಾಡಿಕೊಡು ಭಾವುಕರಾಗಿದ್ದು ಕಂಡುಬಂತು.. ಒಟ್ಟಾರೆ ಕಾರ್ಯಕ್ರಮ ಪೂರ್ತಿ ಅಪ್ಪುಮಯವಾಗಿತ್ತು.. ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಸ್ಟಾರ್ ಯಶ್ ಕೂಡ ಭಾಗಿಯಾಗಿದ್ದರು..
ಈ ವೇಳೆ ಅಪ್ಪು ಅವರನ್ನ ಅವರ ಸಮಾಜ ಮುಖಿ ಕೆಲಸಗಳನ್ನ ಕೊಂಡಾಡಿದ ಯಶ್ ಅವರು ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಿಗೂ ಅಪ್ಪು ಹೆಸರಿನಡಿಯಲ್ಲಿ ಆಂಬ್ಯುಲೆನ್ಸ್ ಒದಗಿಸಲು ಯೋಜನೆ ಹಾಕಿಕೊಂಡಿದ್ದ ಪ್ರಕಾಶ್ ರಾಜ್ ಅವರಿಗೆ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಘೋಷಿಸಿದರು..
ಗಂಧದ ಗುಡಿ ಪ್ರೀ ರಿಲೀಸ್ ಕಾರರ್ಯಕ್ರಮದಲ್ಲಿ ಯಶ್ ಈ ಘೋಷಣೆ ಮಾಡುತ್ತಿದ್ದಂತೆ ಚಪ್ಪಾಳೆ ಸಿಡಿಸಿ ಎಲ್ಲರು ಯಶ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಒಂದೆಡೆಯಾದ್ರೆ , ಸೀಟಿನಿಂದ ಪ್ರಕಾಶ್ ರಾಜ್ ಮೇಲೆದ್ದು ನಿಂತು ಕೈಮುಗಿದು ಚಪ್ಪಾಳೆ ಹೊಡೆಯುತ್ತಾ ಕೃತಜ್ಞತೆ ಸಲ್ಲಿಸಿದರು..
ಅಪ್ಪು ಹೆಸರಿನಡಿಯಲ್ಲಿ ರಾಜ್ಯದ ಪೂರ್ತಿ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿರುವ ಪ್ರಕಾಶ್ ರಾಜ್ ಅವರ ಯೋಜನೆಗೆ ಶಿವಣ್ಣ, ಸೂರ್ಯ ಹಾಗೂ ತೆಲುಗಿನ ಚಿರಂಜೀವಿ ಸಹ ಸ್ಪಂದಿಸಿ ಒಂದೊಂದು ಆಂಬ್ಯುಲೆನ್ಸ್ ಕೊಡಲು ಮುಂದಾಗಿದ್ದರು.. ಇದೀಗ ಈ ಲಿಸ್ಟ್ ಗೆ ಯಶ್ ಕೂಡ ಸೇರಿಕೊಂಡಿದ್ಧಾರೆ..
ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸುವ ಸೇವೆಯನ್ನು ನಾನು ನನ್ನ ಸ್ನೇಹಿತ ಮಾಡುತ್ತೇವೆ. ನಮ್ಮ ಅಪ್ಪು ಅವರ ಹೆಸರಿನಲ್ಲಿ ನೀವು ಈ ಯೋಜನೆ ಆರಂಭಿಸಿದ್ದೀರಾ, ಆ ಕನಸು ಈ ಕ್ಷಣದಿಂದಲೇ ನನಸಾಗಬೇಕು, ಉಳಿದ 25 ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತೇನೆ ಎಂದು ಹೇಳಿದರು..