karthikeya2 ಸೈಲೆಂಟ್ ಆಗಿಯೇ ಬಂದ ಕಾಂತಾರ ಯಾವ ರೀತಿ ಎಲ್ಲಾ ಭಾಷೆಗಳಲ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿದೆಯೋ ಅದೇ ರೀತಿಯಾದ ಅನಿರೀಕ್ಷಿತ ಸಕ್ಸಸ್ ಸಿಕ್ಕಿದ್ದು ನಿಖಿಲ್ ಸಿದ್ಧಾರ್ಥ್ ಹಾಗೂ ಅನುಪಮ ನಟನೆಯ ತೆಲುಗಿನ ಕಾರ್ತಿಕೇಯ 2 ಸಿನಿಮಾಗೆ..
ಈ ಸಿನಿಮಾ ಇಡೀ ದೇಶದ ಜನರಿಗೆ ಇಷ್ಟವಾಗಿತ್ತು.. ಎಲ್ಲಾ ಭಾಷೆಯಲ್ಲೂ ಸೂಪರ್ ಹಿಟ್ ಆಯ್ತು… ಅನುಪಮಾ ನಿಖಿಲ್ ಕಾಂಬಿನೇಷನ್ ಗೆ ಜನ ಫಿದಾ ಆಗಿದ್ದರು.. ಇದೀಗ ಕಾರ್ತಿಕೇಯ 2 ಸೂಪರ್ ಸಕ್ಸಸ್ ನ ನಂತರ ಮತ್ತೊಮ್ಮೆ ಹೊಸ ಸಿನಿಮಾಗೆ ನಿಖಿಲ್ ಅನುಪಮಾ ಜೋಡಿ ಒಂದಾಗುತ್ತಿದ್ದಾರೆ..
ಅಂದ್ಹಾಗೆ ‘18 ಪೇಜಸ್’ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸುತ್ತಿದ್ದಾರೆ.. ಮತ್ತೊಮ್ಮೆ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅಭಿಮಾನಿಗಳ ಆಸೆಯೂ ಈಡೇರಲಿದೆ.. ಅಂದ್ಹಾಗೆ ಕಾರ್ತಿಕೇಯ 2 ಸಿನಿಮಾದ ಜೊತೆ ಜೊತೆಗೆ ಈ ಸಿನಿಮಾದ ಕೆಲಸವೂ ಆರಂಭವಾಗಿತ್ತು..
ಈ ಸಿನಿಮಾಗೆ ಪಲ್ನಾಟಿ ಸೂರ್ಯ ಪ್ರತಾಪ್ ಆಕ್ಷನ್ ಕಟ್ ಹೇಳಲಿದ್ದಾರೆ.. ಸುಕುನಮಾರ್ ಸಿನಿಮಾಗೆ ಕಥೆ ಬರೆದಿದ್ದಾರೆ.. ಚಿತ್ರಕ್ಕೆ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ಬಾಸ್ ಬಂಡವಾಳ ಹೂಡಿದ್ದಾರೆ.‘18 ಪೇಜಸ್’ ಡಿಸೆಂಬರ್ 23ರಂದು ತೆರೆ ಕಾಣಲಿದೆ.