ಸಿನಿಮಾಗಳಿಗಿಂತಲೂ ಹೆಚ್ಚು ವಯಕ್ತಿಕ ವಿಚಾರಗಳಿಂದ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟರ ಪೈಕಿ ಒಬ್ರು , ತಮಿಳಿನ ಸ್ಟಾರ್ ನಟ ಸಿದ್ಧಾರ್ಥ್.. ಇತ್ತೀಚೆಗೆ ಸಿದ್ಧಾರ್ಥ್ ಬಾಲಿವುಡ್ ನಟಿ ಅದಿತಿ ರಾವ್ ಜೊತೆಗೆ ಡೇಟಿಂಗ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ,. ಅದಿತಿ ಜೊತೆಗೆ ಡೇಟಿಂಗ್ ನಲ್ಲಿದ್ದು ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಸೌಂಡ್ ಮಾಡ್ತಿದ್ದು , ಇದಕ್ಕೆ ಪುಷ್ಠಿ ನೀಡುವಂತೆ ಅದಿತಿ ಜೊತೆಗೆ ಬಹಳ ಆತ್ಮೀಯತೆಯಾಗಿರುವಂತಹ ಫೋಟೋವೊಂದನ್ನ ಹಂಚಿಕೊಂಡು ಅವರ ಬರ್ತ್ ಡೇ ಸಿದ್ಧಾರ್ಥ್ ವಿಷ್ ಮಾಡಿದ್ದಾರೆ..
ಸಾಲದಕ್ಕೆ ‘ಹೃದಯದ ರಾಣಿ’ ಅಂತ ಕೊಂಡಾಡಿದ್ದು ಇವರ ನಡುವಿನ ಪ್ರೀತಿ ಪ್ರೇಮ ವದಂತಿಗೆ ಮತ್ತಷ್ಟು ಬಲ ಬಂದಿದೆ.. ಮಹಾಸಮುದ್ರಂ ಸಿನಿಮಾ ವೇಳೆ ಸಿದ್ಧಾರ್ಥ್ ಮತ್ತು ಅದಿತಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಇಲ್ಲಿಂದಲೇ ಇವರ ಪರಿಚಯವಾಗಿ ಪ್ರೀತಿಗೆ ತಿರುಗಿದೆ ಎನ್ನಲಾಗುತ್ತದೆ..