ಸದಾ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಾಗೋ ಸ್ಯಾಂಡಲ್ ವುಡ್ ನಟ ಚೇತನ್ ಇತ್ತೀಚೆಗೆ ಕಾಂತಾರ ಸಿನಿಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅನೇಕರ ಆಕ್ರೋಶಕ್ಕೆ ಗುರಿಯಾಗಿದ್ದರು.. ಅವರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು..
ಇದೀಗ ಚೇತನ್ ಅಪ್ಪು ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಸಿನಿಮಾ ವೀಕ್ಷಿಸಿದ್ದು , ಅಭಿಪ್ರಾಯ ಹಂಚಿಕೊಂಡಿದ್ದಾರೆ..
ಟ್ವೀಟ್ ಮಾಡಿರುವ ಚೇತನ್ , ನನ್ನ ಒಳ್ಳೆಯ ಸ್ನೇಹಿತ ಮತ್ತು ದೊಡ್ಡ ಅಣ್ಣ ಅಪ್ಪು ಸರ್ ಅವರಿಗೆ ಗಂಧದ ಗುಡಿ ಅಂತಿಮ ಅತ್ಯದ್ಭುತ ವಿದಾಯ ಎಂದು ಬರೆದುಕೊಂಡಿದ್ದಾರೆ..
ಅಲ್ಲದೇ ಚಿತ್ರದಲ್ಲಿ ಅಪ್ಪು ಅವರು ಕಾಣಿಸಿಕೊಂಡಿರುವ ರೀತಿ ಹಾಗೂ ಅಮೋಘವರ್ಷ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ. ಪ್ರಕೃತಿಯನ್ನು ತೋರಿಸುವುದರ ಜತೆಗೆ ಆದಿವಾಸಿಗಳು ಹಾಗೂ ಅಲೆಮಾರಿಗಳ ಚಿತ್ರಣವನ್ನು ಉತ್ತಮವಾಗಿ ಸೆರೆ ಹಿಡಿಯಲಾಗಿದೆ ಎಂದಿರುವ ನಟ ಚೇತನ್ , ಭಕ್ತ ಪ್ರಹ್ಲಾದ ಹಾಗೂ ಗಂಧದ ಗುಡಿ ಪುನೀತ್ ರಾಜ್ ಕುಮಾರ್ ಅಭಿನಯದ ನನ್ನ ಆಲ್ ಟೈಮ್ ಫೇವರಿಟ್ ಚಿತ್ರಗಳು ಎಂದಿದ್ದಾರೆ..
ಅಲ್ಲದೇ ಗಂಧದಗುಡಿ ಚಿತ್ರದಲ್ಲಿ ಆದಿವಾಸಿಗಳನ್ನು ತೋರಿಸಿರುವ ರೀತಿಯನ್ನು ಮೆಚ್ಚಿದ್ದಾರೆ..