Liger : ಸೋಲಿನ ಬಗ್ಗೆ ವಿಜಯ್ ದೇವರಕೊಂಡ ಭಾವುಕ ಮಾತು..!!
Liger …. ಸೆನ್ಷೇಷನಲ್ ಸ್ಟಾರ್… ಟಾಲಿವುಡ್ ನ ರೌಡಿ ಹೀರೋ… ವಿಜಯ್ ದೇವರಕೊಂಡ ನಟನೆ …. ಸೆನ್ಷೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ…
ಬೆಟ್ಟದಷ್ಟು ನಿರೀಕ್ಷೆ ಹೊತ್ತು ಬಂದು ಥಿಯೇಟರ್ ಗಳಲ್ಲಿ ಟುಸ್ ಆಗಿದೆ.. ನಿರೀಕ್ಷೆ ಮುಟ್ಟದೇ ಫೇಲ್ ಆಗಿದೆ.. ಬಾಕ್ಸ್ ಆಫೀಸ್ ಶೇಕ್ ಮಾಡದೇ ಇದ್ರು ಪರವಾಗಿಲ್ಲ ಎಂಬಂತೆ ಮೊದಲ ದಿನದ ಕಲೆಕ್ಷನ್ ಇತ್ತಾದ್ರೂ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ..
ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂವ್ ಗಳೇ ಹೆಚ್ಚಾಗಿದೆ.. ಅಂದ್ಹಾಗೆ ಸಿನಿಮಾಗೆ ಅತ್ಯಂತ ಕಳಪೆ IMDB ರೇಟಿಂಗ್ ಸಿಕ್ಕಿದ್ದು , ಇದು ಹುಚ್ಚ ವೆಂಕಟ್ ಸಿನಿಮಾಗಿಂತಲೂ ಕಡಿಮೆಯಿದೆ..
ಈ ವರ್ಷದ ಅಟ್ಟರ್ ಫಾಫ್ ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ರಕ್ಷಾ ಬಂಧನ’ ಚಿತ್ರಗಳಿಂತ ಕಡಿಮೆ ರೆಟಿಂಗ್ ಈ ಸಿನಿಮಾಗೆ ಸಿಕ್ಕಿದೆ…
ಅಂದ್ಹಾಗೆ ಸಿನಿಮಾದಿಂದ ವಿತರಕರಿಗೆ ಭಾರೀ ನಷ್ಟವಾಗಿದೆ..
ನಿರ್ಮಾಪಕ, ಡಿಸ್ಟ್ರಿಬ್ಯೂಟರ್ಸ್ ಗೆ ಭಾರಿ ನಷ್ಟ ಎದುರಾಗಿದೆ.
ಸೋಲಿನ ಬಗ್ಗೆ ವಿಜಯ್ ದೇವರಕೊಂಡ ಇತ್ತೀಚೆಗೆ ಮಾತನಾಡುತ್ತಾ ಬೇಸರ ಹೊರಹಾಕಿದ್ದಾರೆ..
ಇತ್ತೀಚೆಗೆ ನಡೆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ..
ಸೈಮಾ 2022 ರ ಪ್ರಶಸ್ತಿ ಸ್ವೀಕರಿಸಿದ ಮೇಲೆ ಮಾತನಾಡಿದ ಅವರು ಈ ಸಿನಿಮಾದ ಸೋಲಿನ ನೋವನ್ನ ಪರೋಕ್ಷವಾಗಿ ಹೇಳುತ್ತಾ ಭಾವುಕಾರಗಿದ್ದು ಕಂಡು ಬಂತು..
ಇನ್ನು ಮುಂದೆ ಉತ್ತಮ ಸಿನಿಮಾವನ್ನ ಮಾಡಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಒಂದು ಸಿನಿಮಾ ಬಿಡುಗಡೆ ಬಳಿಕ ಎರಡು ರೀತಿಯ ಪ್ರತಿಕ್ರಿಯೆ ಬರುತ್ತದೆ. ನಾನು ಎರಡನ್ನು ನಿಭಾಯಿಸುತ್ತೇನೆ. ನಾನು ನನ್ನ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ, ಎಂದು ಸಂದರ್ಶನ ಒಂದ್ರಲ್ಲಿ ವಿಜಯ್ ಹೇಳಿದ್ದಾರೆ.
Liger talks about liger’s failure