Samantha : ನಾನು ಇಷ್ಟು ಬೇಗ ಸಾಯಲ್ಲ..!! ಹೋರಾಡುತ್ತೇನೆ..!! ತಮ್ಮ ಖಾಯಿಲೆ ಬಗ್ಗೆ ಸ್ಯಾಮ್ ಭಾವುಕ..!!
ಟಾಲಿವುಡ್ ಬಹು ಬೇಡಿಕೆಯ ನಟಿ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಖಾಯಿಲೆ ಬಗ್ಗೆ , ಸಮಂತಾ ಆರೋಗ್ಯದ ಬಗ್ಗೆ ಸಾಕಷ್ಟು ಗೊಂದಲಗಳಿದೆ.. ವದಂತಿಗಳೂ ಕೂಡ ಹರಿದಾಡ್ತಿದೆ..
ಈ ನಡುವೆಯೂ ಸಮಂತಾ ಇದೇ ತಿಂಗಳ 11 ರಂದು ರಿಲೀಸ್ ಆಗಲಿರುವ ತಮ್ಮ ಪ್ಯಾನ್ ಇಂಡಿಯಾ ಬಹುನಿರೀಕ್ಷಿತ ಬಿಗ್ ಬಜೆಟ್ ಯಶೋಧಾ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ..
ಸಂದರ್ಶನವೊಂದ್ರಲ್ಲಿ ಭಾಗಿಯಾಗಿದ್ದಾಗ ಭಾವುಕರಾಗಿ ಮಾತನಾಡಿದ್ದಾರೆ..
ಒಂದೆಡೆ ಅಭಿಮಾನಿಗಳು ಸಮಂತಾ ಆರೋಗ್ಯದ ಸುದ್ದಿ ತಿಳಿದು ಆತಂಕದಲ್ಲಿದ್ದರೆ , ಇನ್ನೂ ಹಲವರು ನಟಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ.. ಇನ್ನೂ ಅನೇಕರು ಇಲ್ಲ ಸಲ್ಲದ ವದಂತಿಗಳನ್ನ ಹಬ್ಬುವುದರಲ್ಲಿ ನಿರತರಾಗಿದ್ದಾರೆ..
ನಟಿ ಸಮಂತ ಮಯೋಸಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಮಾಂಸಖಂಡಗಳ ದೌರ್ಬಲ್ಯ, ನೋವು, ಮತ್ತು ಉರಿಯೂತದಿಂದ ಬಳಲುತ್ತಿರುತ್ತಾರೆ.
ಈ ಬಗ್ಗೆ ಮಾತನಾಡಿರೋ ಸ್ಯಾಮ್…
ಆ ಕಾಯಿಲೆ ವಿರುದ್ಧ ಹೋರಾಟುತ್ತಿದ್ದು, ಅದನ್ನು ಹಿಮ್ಮೆಟ್ಟಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಪಂಚದಲ್ಲಿ ಮಯೋಸೈಟಿಸ್ ರೋಗವನ್ನು ಸಾಕಷ್ಟು ಜನ ಸಮರ್ಥವಾಗಿ ಎದುರಿಸುತ್ತಿದ್ದಾರೆ..
ನಾನು ಕೂಡ ಇದನ್ನು ಎದುರಿಸುತ್ತೇನೆ ಎನ್ನುತ್ತಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ..
ಶೀಘ್ರದಲ್ಲೇ ನಾನು ಇದರಿಂದ ಹೊರ ಬರುತ್ತೇನೆ. ನಾನು ಶೀಘ್ರದಲ್ಲೇ ಸಾಯುವುದಿಲ್ಲ ಎಂದಿದ್ದಾರೆ..
ಸದ್ಯ ಸಮಂತಾರ ಈ ವಿಡಿಯೋ ವೈರಲ್ ಆಗ್ತಿದ್ದ ಹಾಗೆ ಅಭಿಮಾಣಿಗಳು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ..